ಭಾನುವಾರ, ಜುಲೈ 21, 2024

ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳಿಂದ ಚಾತುರ್ಮಾಸ ವ್ರತ ಸಂಕಲ್ಪ

ಸುದ್ದಿಲೈವ್/ಶಿವಮೊಗ್ಗ

ಶ್ರೀಮದ್ ಜಗದ್ಗುರು ಶಂಕರಾಚಾರ್ಯರ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ  ದಕ್ಷಿಣಮ್ನಾಯ ಮೂಲ ಶಾರದ ಪೀಠಾದ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು




ತಮ್ಮ ೪೦ನೇ ವರ್ಷದ ಚಾತುರ್ಮಾಸ ವ್ರತ ಸಂಕಲ್ಪವನ್ನು ವ್ಯಾಸ ಪೂಜೆಯೊಂದಿಗೆ ಇಂದು ನೆರವೇರಿಸಿದರು.


ಮಾತೃಕಾ ಸ್ವರೂಪಿಣಿ ಶ್ರೀ ಶಾರದಾಂಬಾ ಪ್ರೇರಣೆ ಶ್ರೀ ವಿದ್ಯಾಶಂಕರನ ಅನುಗ್ರಹ ಸದ್ಗುರುಗಳ ಆಶೀರ್ವಾದ ಕೃಪೆಯಿಂದ ಚಾತುರ್ಮಾಸ್ಯದ ಅಂಗವಾಗಿ ಶ್ರೀ ಮಠದಲ್ಲಿ ಲೋಕ ಕಲ್ಯಾಣಾರ್ಥ ಇಷ್ಟಅಷ್ಟಕಾಮ್ಯಾಪ್ರಾಪ್ತಿಗಾಗಿ ನಿತ್ಯವೂ ಅಂದರೆ ಜು.21 ಭಾನುವಾರ ದಿಂದ ಸೆಪ್ಟಂಬರ್ 19  ಬುಧವಾರದವರೆಗೆ ಗುರುಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.


ಈ ಪ್ರಯುಕ್ತ ಭಕ್ತರಾದ ತಾವೆಲ್ಲರೂ ಕುಟುಂಬ ಸಮೇತರಾಗಿ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ, ಪರಿವಾರ ಸಹಿತ ಶ್ರೀ ವಿದ್ಯಾಶಂಕರ, ಶ್ರೀ ವಾಲುಕಾಪರಮೇಶ್ವರ, ಶ್ರೀ ಚಂದ್ರಮೌಳೇಶ್ವರ, ಶ್ರೀ ಚಕ್ರನಿವಾಸಿನಿ ಸಹಿತ ಶ್ರೀ ಶಾರದಾಂಬೆ ದೇವರ ಮತ್ತು ಶ್ರೀ ಶ್ರೀ ಶಂಕರರಾಚಾರ್ಯ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ, ತ್ರಿಕರಣ ಪೂರ್ವಕ ಸಹಕರಿಸಬೇಕಾಗಿ ಮಠದ ಪರವಾಗಿ ವಿನಂತಿಸಿಕೊಳ್ಳುತ್ತೇವೆ. 


ಧಾರ್ಮಿಕ ಸೇವಾ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರಮೇಶ್ ಹುಲಿಮನಿ, ವ್ಯವಸ್ಥಾಪಕರು-9844570404, 9632570137, 9353958230  ಇವರನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ-https://www.suddilive.in/2024/07/blog-post_149.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ