ಗುರುವಾರ, ಜುಲೈ 18, 2024

ಸಧ್ಯಕ್ಕೆ 6 ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ

ಸುದ್ದಿಲೈವ್/ಶಿವಮೊಗ್ಗ

ರಾತ್ರಿಯಿಡಿ ಸುರಿದ ಮಳೆಗೆ ಮಲೆನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ.  ಈಗಾಗಲೇ ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಶಾಲಾ ಕಾಲೆಜುಗಳಿಗೆ ರಜೆ ಘೋಷಿಸಲಾಗಿತ್ತು.

ಸಾಗರ, ಶಿಕಾರಿಪುರ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ತಹಶೀಲ್ದಾರ್ ಗಳು ಶಾಲೆ ಕಾಲೇಜಿಗೆ ರಜೆ ಘೋಷಿಸಿದ್ದಾರೆ. ಮಳೆಯ ಆರ್ಭಟ ಅವಲೋಕಿಸಿ ತಹಶೀಲ್ದಾರ್ ಅವರಿಗೆ ರಜೆ ಘೋಷಿಸಲು ಜಿಲ್ಲಾಡಳಿತ ಸೂಚೊಸಿದೆ.. 

ಸಧ್ಯಕ್ಕೆ ಭದ್ರಾವತಿ‌ ಹೊರತು ಪಡಿಸಿ ಉಳಿದ 6 ತಾಲೂಕಿನಲ್ಲಿ ಇಂದು ಅಧಿಕ ಮಳೆ ಹಿನ್ನಲೆಯಲ್ಲಿ ರಜೆ ಘೋಷಿಸಲಾಗಿದೆ.‌ ಅದರಂತೆ ತಹಶೀಲ್ದಾರ್ ಗಿರೀಶ್ ಸುದ್ದಿಲೈವ್ ಗೆ  ಮಾತನಾಡಿ ಶಿವಮೊಗ್ಗ ತಾಲೂಕಿನ ಅಂಗನವಾಡಿ ಮಕ್ಕಳಿಗೂ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ