ಸುದ್ದಿಲೈವ್/ಶಿವಮೊಗ್ಗ
ಸಾಲದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಚಾಕುವಿನಿಂದ ಇರಿದ ಪ್ರಕರಣದಲ್ಲಿ ಯುವಕನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಬುದ್ದನಗರದಲ್ಲಿ ಕೇವಲ 300 ರೂ ವಿಚಾರದಲ್ಲಿ ಅನ್ವರ್ ಎಂಬ ಯುವಕ ತಿಲಕ್ ಎಂಬ ಯುವಕನಿಗೆ ಚಾಲುವಿನಿಂದ ಇರಿದಿರುವುದಾಗಿ ಹೇಳಲಾಗುತ್ತಿದೆ. ಸಾಲ ನೀಡಿದ್ದನ್ನ ಕೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಇರಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ತಿಲಕ್ ಮೆಗ್ಗಾನ್ ಆಸ್ಪತ್ರೆಯಲ್ಲೇ ಹೊರಗುತ್ತಿಗೆಯ ಮೇಲೆ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಒಂದು ವಾರದ ಹಿಂದೆ ಅನ್ವರ್ ಬಳಿ ತಿಲಕ್ 300 ರೂ ಪಡೆದಿರುತ್ತಾನೆ. ಅನ್ವರ್ ಮತ್ತು ತಿಲಕ್ ಇಬ್ವರೂ ಒಂದೇ ಏರಿಯಾದ ಸ್ನೇಹಿತರಾಗಿದ್ದಾರೆ.
ಅನ್ವರ್ ಹಣ ಕೇಳಿದಾಗ ನೀನು ಎಲ್ಲಿದೆಯಾ ಎಂದು ಹೇಳಿದ ತಿಲಕ್ ಬುದ್ದನಗರಕ್ಕೆ ಬಂದು ಗಲಾಟೆ ಮಾಡಿಕೊಂಡಿದ್ದಾರೆ ಗಲಾಟೆಯಲ್ಲಿ ತಿಲಕ್ ಗೆ ಅನ್ವರ್ ಚಾಕು ಹಾಕಿದ್ದಾನೆ. ಅನ್ವರ್ ಗೆ ದರ್ಶನ್ ಎಂಬ ಯುವಕ ಸಾಥ್ ನೀಡಿರುವುದಾಗಿ ತಿಳಿದು ಬಂದಿದೆ. ಆರೋಪಿತರು ಪರಾರಿಯಾಗಿದ್ದಾರೆ.
ಇದನ್ನೂ ಓದಿ-https://suddilive.in/archives/19623
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ