Girl in a jacket

ಅಗ್ನಿವೀರ್ ವಾಯುಸೇವೆಗೆ ಆಯ್ಕೆ ಪರೀಕ್ಷೆಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

ಸುದ್ದಿಲೈವ್/ಶಿವಮೊಗ್ಗ

ಭಾರತೀಯ ವಾಯುಪಡೆಯಿಂದ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಸೇವೆಗೆ ಆಯ್ಕೆ ಪರೀಕ್ಷೆಗಾಗಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ/ತತ್ಸಮಾನ, ಡಿಪ್ಲೋಮಾ, ವೃತ್ತಿಪರ ಕೋರ್ಸ್ ವಿದ್ಯಾರ್ಹತೆ ಹೊಂದಿರುವ, 03, ಜುಲೈ-2004 ರಿಂದ 03, ಜನವರಿ 2008ರ ನಡುವೆ ಜನಿಸಿರುವ ಅವಿವಾಹಿತ ಪುರುಷ ಮತ್ತು ಮಹಿಳೆಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿಯನ್ನು ಆನ್‍ಲೈನ್ https://agnipathvayu.cdac.in  ರಲ್ಲಿ ನೊಂದಾಯಿಸಿಕೊಂಡು, ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಖಲಂದರ್ ಖಾನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-255293/ 9108235132 ಗಳನ್ನು ಸಂಪರ್ಕಿಸುವುದು.

ಇದನ್ನೂ ಓದಿ-https://suddilive.in/archives/18560

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close