ಸುದ್ದಿಲೈವ್/ ಶಿವಮೊಗ್ಗ
ಹಾವೇರಿಯಲ್ಲಿ ಹೈವೆ ಮೇಲೆ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ಲರ್ ವೊಂದು ಡಿಕ್ಕಿ ಹೊಡೆದು 13 ಜನರಸಾವಿಗೆ ಕಾರಣವಾಗಿದ್ದ ಘಟನೆ ನಡೆದು 10 ದಿನಗಳು ನಡೆದಿದೆ. 10 ದಿನಗಳ ನಂತರ ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತರವರು ಗ್ರಾಮಕ್ಕೆ ಭೇಟಿಯಾಗಿ ಮೃತರಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಅಪಘಾತದಲ್ಲಿ ಎಮ್ಮೆಹಟ್ಟಿಯಲ್ಲಿದ್ದ ಮಾನಸ, ಮತ್ತು ತಾಯಿ ಭಾಗ್ಯಮ್ಮ, ನಾಗೇಶಪ್ಪ, ಮೀನಾಕ್ಷಮ್ಮ, ಮಗ ಆದರ್ಶ ಹಾಗೂ ತಾಯಿ ಸುಭದ್ರಮ್ಮ ಅವರನ್ನ ಕಳೆದುಕೊಂಡು ಗ್ರಾಮ ಸ್ಮಶಾನ ಮೌನಕ್ಕೆ ಜಾರಿತ್ತು. ಇವರ ಮನೆ ಪರಿಸ್ಥಿತಿ ಗಂಭೀರವಾಗಿದೆ.
ಫುಟ್ ಬಾಲ್ ಪ್ಲೇಯರ್ ಆಗಿದ್ದ ಮಾನಸ ಅಧಂಳಾಗಿದ್ದಳು. ಅಂಧಳಾಗಿದ್ದು ಏಷಿಯನ್ ಕಪ್ ಗಾಗಿ ಅಙಧರ ಹಾಕಿಯಲ್ಲಿ ಕೊಚ್ಚಿಯಲ್ಲಿ ಫುಟ್ ಬಾಲ್ ಆಡಿದ್ದಾಳೆ. ಜಪಾನ್ ವಿರುದ್ಧ ಆಡಿದ್ದ ಮಾನಸಾಳ ಕುಟುಂಬ ನೋವನ್ನ ವ್ಯಕ್ತಪಡಿಸಿದೆ.
ಸ್ಪೋರ್ಟ್ಸ್ ಅಸೋಸಿಯೇಷನ್‌ಬಂದು ಮಾತನಾಡಿದರೂ ಫುಟ್ಬಾಲ್ ಫೆಡರೇಷನ್ ಒಬ್ವರೂ ಬಂದಿಲ್ಲ. ಆದರೆ ಅವರ ನಿಧನದ ಬಗ್ಗೆ ಯಾವ ಸಂಘಟನೆಯವರು ಶ್ರದ್ಧಾಂಜಲಿ ಸಲ್ಲಿಸದೆ ಇರುವುದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿದ್ದ ಮಾನಸರನ್ನ ದೇವಸ್ಥಾನಕ್ಕೆ ಹೋಗಲು ಕುಟುಂಬಸ್ಥರು ಕರೆದಿದ್ದರು. ಏಷನ್ ಪುಟ್ ಬಾಲ್ ನಲ್ಲಿ ಭಾಗಿಯಾಗಿದ್ದ ಮಾನಸಳ ಸಾವಿನ ಸಮಯದಲ್ಲಿ ಕ್ರೀಡಾಪಟುವಾಗಿ ಸಂಧಬೇಕಿದ್ದ ಗೌರವ ದೊರೆತಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ.
ಮಾನಸಾಳ ಕಥೆ ಒಂದು ಕಡೆಯಾದರೆ, ಗಾಯಗೊಂಡಿದ್ದ ಅರ್ಪಿತಳ ತಂದೆ ನಾಗೇಶ್ ರಾವ್, ವಿಶಾಲಾಕ್ಷಮ್ಮ ಆದರ್ಶ್, ಅಜ್ಜಿ ಸುಭದ್ರಮ್ಮ ಅಪಘಾತ ನಡೆದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗವಿಕಲಾಂಗದೆಯಾದ ಅರ್ಪಿತಾಳರನ್ನ ದೊಡ್ಡಮ್ಮಮತ್ತು ಚಿಕ್ಕಮ್ಮ ರು ನೋಡಿಕೊಳ್ತಿದ್ದಾರೆ. ಆದರೆ ಅಪಘಾತದಲ್ಲಿ ಮೃತರಾದ ಮನೆಯವರ ಬಗ್ಗೆ ಅರ್ಪಿತಾಳಿಗೆ ಇನ್ನೂ ತಿಳಿಸಿಲ್ಲ. ಸಧ್ಯಕ್ಕೆ ಡಿಸ್ಚಾರ್ಜ್ ಆಗಿ ಎಮ್ಮೆಹಟ್ಟಿಯ ಮನೆಗೆ ಬಂದಿದ್ದಾರೆ. ಮನೆಯಲ್ಲಿ ನೀರಸ ಮೌನಕಾಡಿದೆ. ಆದರೆ ಅರ್ಪಿತಳ ಮನದಲ್ಲಿ ತಂದೆ ತಾಯಿ ಇನ್ನೂ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂಬ ಭಾವನೆ ಇದೆ.
ಆದರೆ ಇಂದು ಕರ್ನಾಟಲ ಕ್ಷತ್ರೀಯ ಮರಾಠ ಪರಿಷತ್ 65 ಸಾವಿರವನ್ನ ನೀಡಿದೆ. ಈ ಹಿಂದೆ ನಟ ಶಿವರಾಜ್ ಕುಮಾರ್ ದಂಪತಿಗಳು ಘೋಷಿಸಿದಂತೆ ಮೃತರಿಗೆ ತಲಾ ಒಂದು ಲಕ್ಷ ರೂ. ಹಣವನ್ನೇ ನೀಡಿದರು. 13 ಜನರು ಅಪಘಾತದಲ್ಲಿ ಮೃತರಾಗಿದ್ದು 13 ಲಕ್ಷದ ರೂ ಬಂಡಲ್ ನೀಡಲಾಯಿತು. ಈ ಹಣವನ್ನ ಮೃತ ವಿಶಾಲಾಕ್ಷಿ ನಾಗೇಶ್ ಕುಟುಂಬರಿಗೆ ನೀಡಲಾಯಿತು.
ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಘೋಷಿಸಲಾಹಿತ್ತು. ಅದರಲ್ಲಿ ಇಬ್ವರು ಗುಣಮುಖರಾದರೂ ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಈ ವೇಳೆ ಭದ್ರಾವತಿಯ ಶಾಸಕ ಸಂಗಮೇಶ್ವರ್ ಶಿವರಾಜ್ ಕುಮಾರ್ ದಂಪತಿಗಳಿಗೆ ಸಾಥ್ ನೀಡಿದರು.
ಇದನ್ನೂ ಓದಿ-https://suddilive.in/archives/18729
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ