ಸುದ್ದಿಲೈವ್/ಶಿವಮೊಗ್ಗ
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದ್ದು, ಮೆಗ್ಗಾನ್ ನಲ್ಲಿ ಡೆಂಗ್ಯೂ ಪ್ರಕರಣ ಮತ್ತು ಅದರ ಬಗ್ಗೆಪರಿಶೀಲನೆಗಾಗಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ರಾಜ್ಯ ಸಂಚಾಲಕ ದತ್ತಾತ್ರಿ ಅವರ ನೆತೃತ್ವದಲ್ಲಿ ವೈದ್ಯಕೀಯ ತಂಡ ಮೆಗ್ಗಾನ್ ಗೆ ಭೇಟಿ ನೀಡಿತು.
ಮೆಗ್ಗಾನ್ ನಲ್ಲಿ ಸಧ್ಯ ವೈರಲ್ ವಾರ್ಡ್ ನಲ್ಲಿ 45 ಜನ ಡೇಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಡಿಸಿನ್ ಗಳ ಕೊರತೆಯಿಲ್ಲ. ಪರೀಕ್ಷೆ ಕಿಟ್ ಗಳು ಸಾಕಷ್ಟಿದೆ. ನೆಟ್ ಸಮಸ್ಯೆ ಇದೆ. ಒಡಮಸ್ ನಂತಹ ಆಯಿಂಟ್ ಮೆಂಟ್ ಸಾಕಷ್ಟಿರುವ ಬಗ್ಗೆ ಮಾಹಿತಿ ಇಲ್ಲ.
ಆದರೆ ಬಿಜೆಪಿ ಪ್ರಕೋಷ್ಠ ಡೇಂಗ್ಯೂ ಪರಿಶೀಲನೆ ನಡೆಸಿದೆ. ಅಧೀಕ್ಷಕ ಡಾ.ತಿಮ್ಮಪ್ಪನವರನ್ನ ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. 20 ಸಾವಿರ ಪ್ಲೇಟ್ ಲೇಟ್ ಗಳು ಕಡಿಮೆ ಬಂದರೆ ಪ್ಲೇಟ್ ಲೇಟ್ ಹೆಚ್ಚಾಗಲು ಚಿಕಿತ್ಸೆ ನೀಡಲಾಗುತ್ತದೆ. 45 ರಿಂದ 1 ಲಕ್ಷ ಪ್ಲೇಟ್ ಲೇಟ್ ವರೆಗೂ ಅಬ್ಸರ್ವೇಷನ್ ನಲ್ಲಿಡಲಾಗುತ್ತಿದೆ.
ಈ ವೇಳೆ ಪ್ರಕೋಷ್ಠಗಳ ಸಂಚಾಲಕ ಹೃಷಿಕೇಶ್ ಪೈ ಸಹ ಸಂಯೋಜಕ ಶ್ರೀನಿವಾಸ ರೆಡ್ಡಿ,ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/18738
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ