ಸುದ್ದಿಲೈವ್/ಶಿವಮೊಗ್ಗ
ಭೀಮೇಶ್ವರ ದೇವಸ್ಥಾನದ ತುಂಗ ನದಿಯ ಭೀಮನ ಮಡುವಿನಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದೆ. ಮೃತದೇಹವನ್ನ ಮಾಲಿನಿ ಎಂದು ಗುರುತಿಸಲಾಗಿದೆ.
ಇವರಿಗೆ 57 ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ. ದೊಡ್ಡಪೇಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಮಾಲಿನಿ ಭೀಮನ ಮಡಿಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನ್ಯೂ ಮಂಡ್ಲಿಯ ವಿಜಯ ಬೇಕರಿ ಹಿಂಭಾಗದ ನಿವಾಸಿಯಾಗಿದ್ದ ಮಹಿಳೆ ಜು.10 ರಂದು ನಾಪತ್ತೆಯಾಗಿದ್ದರು ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಇಂದು ಶವವಾಗಿ ಪತ್ತೆಯಾಗಿದ್ದಾರೆ. ಭೀಮನ ಮಡುವಿನಲ್ಲಿ ಮಹಿಳೆಯ ಮೃತದೇಹ ತೇಲಿ ಬಂದಿದೆ
ಮೃತರು ಮಾನಸಿಕ ಅಸ್ವಸ್ಥರಾಗಿದ್ದು ನಿನ್ನೆ ಬೆಳಗ್ಗೆಯಿಂದ ಮಹಿಳೆ ಕಾಣೆಯಾಗಿದ್ದರು. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/19034
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ