ಸುದ್ದಿಲೈವ್/ಶಿವಮೊಗ್ಗ
ನಿವೃತ್ತಿ ಹೊಂದಿದ ಅನ್ನದಾಸೋಹ ನೌಕರರಿಗೆ ಇಡಿಗಂಟು ನೀಡಲು ಅಧಿಸೂಚನೆ ಹೊರಡಿಸಿರುವ ಸರ್ಕಾರಕ್ಕೆ ಅಕ್ಷದಾಸೋಹ ನೌಕರರ ಸಂಘ (ಸಿಐಟಿಯು) ಧನ್ಯವಾದ ತಿಳಿಸಿದೆ.
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆ ಅಡಿ ನೇಮಕಗೊಂಡು 60 ವರ್ಷಗಳನ್ನ ಪೂರೈಸಿ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನ ವಿಸ್ತರಿಸಲು ಒಪ್ಪಿಕೊಂಡಿದೆ.
15 ವರ್ಷ ಹಾಗೂ ಅದಕ್ಕೂ ಹೆಚ್ಚಿನ ಅವಧಿಗೆ ಸೇವೆಸಲ್ಲಿಸಿ ನಿವೃತ್ತಿಗೊಂಡ ಅಡುಗೆ ಸಿಬ್ಬಂದಿಗಳಿಗೆ 40 ಸಾವಿರ ರೂ. ಇಡಿಗಂಟು ನೀಡಲು, 5 ವರ್ಷಕ್ಕೂ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ನಿವೃತ್ತಿಯಾದ 30 ಸಾವಿರ ರೂ. ಇಡಿಗಂಟು, ಕನಿಷ್ಠ 5 ವರ್ಷ ಸೇವೆಯನ್ನ ಪೂರ್ಣಗೊಳಿಸಿದ ಅಡುಗೆ ಸಿಬ್ಬಂದಿಗೆ ಒಂದು ಬಾರಿ ಇಡಿಗಂಟು ಸೌಲಭ್ಯ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಸೌಲಭ್ಯಕ್ಕಾಗಿ ಸಿಐಟಿಯು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿತ್ತು. ಜು.15 ರಂದು ಇಡಿಗಂಟು ನೀಡುವಂತೆ ಮತ್ತು ವಿವಿಧಬೇಡಿಕೆಗೆ ಒತ್ತಾಯಿಸಿ ಸಂಘಟನೆ ಪ್ರತಿಭಟಿಸಿತ್ತು. ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸಂಘಟನೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದೆ.
ಮುಂದಿನ ದಿನಗಳಲ್ಲಿ ಸಂಬಳ ಹೆಚ್ಚಿಸುವುದಾಗಿ ಮತ್ತು ಇಡಿಗಂಟು ಹೆಚ್ಚಿಸುವ ಭರವಸೆ ಇದೆ. ಈ ಭರವಸೆ ಈಡೇರದಿದ್ದರೆ ಮತ್ತೆ ಪ್ರತಿಭಟನಿಸುವುದಾಗಿ ಎಚ್ಚರಿಸಿದೆ.
ಇದನ್ನೂ ಓದಿ-https://www.suddilive.in/2024/07/45.html