ಸಿ.ಎಸ್.ಷಡಾಕ್ಷರಿಗೆ ಶಾಲು ಹೊದಿಸಿ ಸನ್ಮಾನ |
ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅ್ಯಕ್ಷರಾದ ಶ್ರೀಯುತ ಸಿ ಎಸ್ ಷಡಾಕ್ಷರಿ ಅವರು ಇಂದು 45 ರ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರ 45ನೆ ವರ್ಷದ ಹುಟ್ಟುಹಬ್ಬವನ್ನು ನೆಹರು ಸ್ಟೇಡಿಯಂ ಮುಂಭಾಗದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ನೆಹರೂ ಸ್ಟೇಡಿಯಂ ಗೆಳೆಯರ ಬಳಗ ಹಾಗು ಸ್ನೇಹಿತರ ವತಿಯಿಂದ ಹುಟ್ಟುಹಬ್ಬವನ್ನ ಆಚರಿಸಲಾಗಿದೆ. ಈ ವೇಳೆ ಅವರ ಅಭಿಮಾನಿ ಬಳಗ ಮುಂದಿನ ಶಾಸಕರಾದ ಷಡಾಕ್ಷರಿಯವರ ಹುಟ್ಟುಹಬ್ಬಕ್ಕೆ ಶುಭಾಶಯಗಳು ಎಂದು ಬೋಧಿಸಿದರು. ಇದಕ್ಕೆ ಪಾಸ್ ಕೊಟ್ಟ ಅಧ್ಯಕ್ಷರು ಸರ್ಕಾರಿ ನೌಕರರಿಗೆ ನಾನೇ ಶಾಸಕ ನಾನೇ ಸಚಿವ ಎಂದು ಹೇಳಿ ನಗೆ ಬೀರಿದರು.
ನಂತರ ಮಾತನಾಡಿದ ಅವರು ನನ್ನನ್ನ ಎರಡು ವರ್ಗ ಹುಡುಕಿಕೊಂಡು ಬಂದಿದೆ. ಒಂದು ವರ್ಗ ಪ್ರಭಾವವನ್ನ ಹುಡುಕಿಕೊಂಡು ಬಂದರೆ ಇನ್ನೊಂದು ವರ್ಗ ಸ್ನೇಹವನ್ನ ಹುಡುಕಿಕೊಂಡು ಬಂದವರು ಎಂದು ತಿಳಿಸಿದರು.
ಪ್ರಭಾವವನ್ನ ಹುಡುಕಿಕೊಂಡು ಬಂದ ವರ್ಗ ಕೊನೆಯ ತನಕ ಬರೋದಿಲ್ಲ. ಆದರೆ ಸ್ನೇಹಕ್ಕೆ ಮಣಿದು ಬಂದ ವರ್ಗ ಅಧಿಕಾರ ಇಲ್ಲದ ವೇಳೆಯಲ್ಲೂ ಜೊತೆಗಿರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ-https://www.suddilive.in/2024/07/blog-post_320.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ