ಶುಕ್ರವಾರ, ಜುಲೈ 19, 2024

ಹಾಲಿನಂತಹ ಬಿಳುಪಾದ ಬಾಳೇಬರೆ ಫಾಲ್ಸ್

 ಸುದ್ದಿಲೈವ್/ಶಿವಮೊಗ್ಗ 


ಭಾರಿ ಮಳೆ ಬಿಡುವು ನೀಡಿದ್ದರ ಹಿನ್ಬಲೆಯಲ್ಲಿ ಹುಲಿಕಲ್ ಘಟ್ ನಲ್ಲಿರುವ ಬಾಳೆಬರೆ ಫಾಲ್ಸ್ ಅಕ್ಷರಶಃ ಪ್ರೇಕ್ಷಕರ ರಮಣೀಯ ಸ್ಥಳವಾಗಿ ಮಾರ್ಪಟ್ಟಿದೆ.  ಹುಲಿಕಲ್ ಘಾಟಿನ ಬಾಳೆಬರೆ ಜಲಪಾತ ಪ್ರವಾಸಿಗರು 10 ನಿಮಿಷ ವಾಹನ ನಿಲ್ಲಿಸಿ ಫೊಟೊ ತೆಗೆಯುವಂತೆ ಪ್ರೋತ್ಸಹಿತುತ್ತಿದೆ. 




ಶಿವಮೊಗ್ಗ-ಕುಂದಾಪುರಕ್ಕೆ ಹೋಗುವ ರಸ್ತೆ ಇದಾಗಿದ್ದು, ಹೊಸನಗರ ತಾಲೂಕಿಗೆ ಸೇರಲಿದೆ. ಹೊಸನಗರ ನಗರ ಮಾಸ್ತಿಕಟ್ಟೆಯ ಮೂಲಕ ಕುಂದಾಪುರಕ್ಕೆ ಹೋಗುವ ಹುಲಿಕಲ್ ಘಾಟಿಯಲ್ಲಿ ಮಳೆಯಿಂದಾಗಿ ಬಾಳೆಬರೆ ಫಾಲ್ಸ್ ಮಳೆಯಿಂದಾಗಿ ಹಾಲಿನ ನೊರೆಯಂತೆ ಹರಿಯುತ್ತಿದೆ.  ಬೇಸಿಗೆಯಲ್ಲೂ ಸಣ್ಣ ಪ್ರಮಾಣದಲ್ಲಿ ಹರಿಯುವ ಈ ಫಾಲ್ಸ್  ಮಳೆಗಾಲದಲ್ಲಿ ಕಡಿದಾದ ಜಾಗದಿಂದ ದುಮ್ಮಿಕ್ಕುವಾಗ ಹಾಲಿನ ನೊರೆಯಂತೆ ಹರಿಯುವ ಈ ಫಾಲ್ಸ್ ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. 

ಆಗುಂಬೆ ಮಾರ್ಗ ಬಿಟ್ಟರೆ, ಕುಂದಾಪುರ, ಮಣಿಪಾಲ್, ಉಡುಪಿ ಮಂಗಳೂರಿಗೆ ಹೋಗುವ ಮಾರ್ಗ ಇದಾಗಿದೆ.  ಕಾರು ಬೈಕು ಸವಾರರನ್ನ ಬಾಳೇಬರೆ ಫಾಲ್ಸ್ ಕೈಬೀಸಿ ಕರೆಯುತ್ತಿದೆ. ರಮಣೀಯ ದೃಶ್ಯ ಸೂರೆಗೊಳ್ಳಲು ಜನ ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡು 10 ನಿಮಿಷ ಕಾಲ ಕಳೆಯುವ ಜಾಗವಾಗಿದೆ. ಇದಕ್ಕೆ ಪೂರಕವೆಂಬಂತೆ ಮಳೆಯೂ ಸಹ ವಿಶ್ರಾಂತಿ ನೀಡಿರುವುದು ಪ್ರಯಾಣಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ.






ಈ ಕುರಿತು ಸುದ್ದಿಲೈವ್ ಗೆ ಮಾತನಾಡಿದ ಶಿವಮೊಗ್ಗದವರೇ ಆದ ಹಿಮಾನಿ ಅವರು ಮಣಿಪಾಲ್ ಗೆ ಹೋಗಿದ್ವಿ, ಮಣಿಪಾಲ್ ನಿಂದ ಆಗುಂಬೆ ಮೂಲಕ ಶಿವಮೊಗ್ಗಕ್ಕೆ ಹೋಗಬಹುದಿತ್ತು. ಆದರೆ ಬಾಳೇಬರೆ ಫಾಲ್ಸ್ ನೋಡಲೆಂದೆ ಹುಲಿಕಲ್ ಮಾರ್ಗವಾಗಿ ಬಂದಿರುವುದಾಗಿ ಹೇಳಿದ್ದಾರೆ. 

 

ಅದರಂತೆ ತೆಲಂಗಾಣ ರಾಜ್ಯದಿಂದ  ಕಮಲಶಿಲೆ ದೇವಸ್ಥಾನಕ್ಕೆ ಹೋಗುತ್ತಿರುವ ಆಯುರ್ವೇದದ ವೈದ್ಯರಾಗಿರುವ ಶೃತಿ ಈ ಝರಿ ನೋಡಿ ಮನಸೋತಿರುವೆ. ಈ ಪ್ರಕೃತಿ ಮುದನೀಡುತ್ತಿದೆ ಎಂದು ಹರ್ಷೋಧ್ಗಾರಕರಾಗಿ ಮಾತನಾಡಿದರು.  


ಹುಚ್ಚಾಟ ಮೆರೆಯುತ್ತಿರುವ ಯುವಕರು


ಬೈಕ್ ನಲ್ಲಿ ಬರುವ ಕೆಲ ಯುವಕರು ಈ ಪ್ರೇಕ್ಷಣೀಯ ಸ್ಞಳದಲ್ಲಿ ಹುಚ್ಚಾಟ ಮೆರೆದಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಮತ್ತು ಇತರೆ ಸಂಬಂಧಪಟ್ಟ ಇಲಾಖೆ ಕಟ್ಟೆಚ್ಚರ ನೀಡಿದೆ. ಜಲಪಾತದ ರಭಸ ಹೆಚ್ಚಾಗಿದೆ ಯಾರೂ ದಂಡೆಯ ಮೇಲೆ ನಿಂತು ಫೊಟೊ ತೆಗೆಯದಂತೆ ಕಟ್ಟೆಚ್ಚರ ನೀಡಿದರೂ ಕೆಲ ಬೈಕ್ ಸವಾರರು ಹುಚ್ಚಾಟ ಮೆರೆದಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ