ಭಾನುವಾರ, ಜುಲೈ 21, 2024

ಅಖಿಲ ಭಾರತ ವೀರಶೈವ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ರುದ್ರಮುನಿ ಸಜ್ಜನ್ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಆಯ್ಕೆ

 


ಸುದ್ದಿಲೈವ್/ಶಿವಮೊಗ್ಗ


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ   ರುದ್ರಮುನಿ ಎನ್. ಸಜ್ಜನ್ 321 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದರಿಂದ ಸಜ್ಜನ್ ಅವರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಮೊದಲ ಬಾರಿಗೆ ಮಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆದಿದೆ. ಮೂರು ಬಾರಿಯೂ ಅವಿರೋಧ ಆಯ್ಕೆಯಾಗುತ್ತಿದ್ದ ರುದ್ರಮುನಿ ಸಜ್ಜನ್ 4 ನೇ ಬಾರಿಗೆ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಚುನಾವಣೆ ಎದುರಿಸಿ ಅವರಿಗೆ ಜಯ ಸಿಕ್ಕಿದೆ. 
 

ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿತ್ತು. ರುದ್ರಮುನಿ ಸಜ್ಜನ್ ವಿರುದ್ದ ಕಡ್ಡಿಪುಡಿ ತೀವ್ರ ಪೈಪೋಟಿ ನೀಡಿದ್ದರು. ಇವರು ಸಹ ಪ್ರಬಲ ಪೈಪೋಟಿ ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯಲ್ಲಿ ರುದ್ರಮುನಿ ಅವರಿಗೆ ಜಯ ದೊರೆತಿದೆ.  ಭದ್ರಾವತಿಯಲ್ಲಿ ರುದ್ರಮುನಿ ಸಜ್ಜನ್ 179 ಮತಗಳನ್ನು ಪಡೆದರೆ, ಕಡ್ಡಿಪುಡಿ 75 ಮತಗಳು ಪಡೆದಿದ್ದಾರೆ ಎಂಬ ಮಾಹಿತಿ ಇದೆ.


ಇಂದು ಬೆಳಿಗ್ಗೆಯಿಂದ ಸಂಜೆ 5 ಗಂಟೆಯ ವರೆಗೆ ಎನ್ ಡಿವಿ ಹಾಸ್ಟೆಲ್ ನಲ್ಲಿ ಮತದಾನ ನಡೆದಿದೆ. ಸಂಜೆಯೇ ಮತ ಎಣಿಮೆ ಇದ್ದು ಫಲಿತಾಂಶ ಹೊರಬಿದ್ದಾಗ ಸಜ್ಜನ್ ಅವರು ಅಶ್ವಿನ್ ಕಡ್ಡಿಪುಡಿ ಅವರಿಗಿಂತ 321 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.


ಇದನ್ನೂ ಓದಿ-https://www.suddilive.in/2024/07/blog-post_396.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ