ಭಾನುವಾರ, ಜುಲೈ 21, 2024

ಜೋಗ ಜಲಪಾತದ ನೋಡಲು ಆಗಮಿಸಿದ್ದ ಯುವಕ ನಿಗೂಢವಾಗಿ ಕಣ್ಮರೆ-ಶೋಧ ಕಾರ್ಯ


 ಸುದ್ದಿಲೈವ್/ಜೋಗಫಾಲ್ಸ್ , ಜು. 21

 

ಜೋಗ ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ  ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ಕಣ್ಮರೆಯಾಗಿರುವ ಘಟನೆ ನಡೆದಿದ್ದು, ಯುವಕನಿಗಾಗಿ ಕಾರ್ಗಲ್ ಠಾಣೆ ಪೊಲೀಸರ ಶೋಧ ಕಾರ್ಯ ನಡೆಸುತ್ತಿದ್ದಾರೆ.


ಮೂಲತಃ ಗದಗ  ಜಿಲ್ಲೆಯ ನಿವಾಸಿಯಾದ, ಪ್ರಸ್ತುತ ಬೆಂಗಳೂರಿನಲ್ಲಿ  ಟೀ ಅಂಗಡಿ ನಡೆಸುತ್ತಿರುವ ಆನಂದ್ (24) ಜಲಪಾತದ  ಬಳಿ ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಯುವಕನಿಗಾಗಿ ಜಲಪಾತದ ಬಳಿ ಶೋಧ ನಡೆಸುತ್ತಿದ್ದಾರೆ.


ನಿಗೂಢ ಕಣ್ಮರೆ


ಜು . 15 ರಂದು ಯುವಕ ಆನಂದ್ ಜೋಗ ಜಲಪಾತಕ್ಕೆ  ಆಗಮಿಸಿದ್ದ. ಯಾತ್ರಿ ನಿವಾಸದದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ನಂತರ ಆತನ ಸುಳಿವು ಲಭ್ಯವಾಗಿಲ್ಲ.


ಯುವಕ ತಂದಿದ್ದ ಬ್ಯಾಗ್ ಸಿಕ್ಕಿದೆ. ಕಳೆದ 6 ದಿನಗಳಿಂದಲೂ ಯುವಕನಿಗಾಗಿ ಕಾರ್ಗಲ್ ಠಾಣೆ ಸಬ್ ಇನ್ಸ್ಪೆಕ್ಟರ್  ಹೊಳೆಬಸಪ್ಪ ಹೋಳಿ ನೇತೃತ್ವದ ಪೊಲೀಸ್ ತಂಡ ಶೋಧ ಕಾರ್ಯ ನಡೆಸುತ್ತಿದೆ. ಆದರೆ ಸುಳಿವು ಲಭ್ಯವಾಗಿಲ್ಲ.


ಜೋಗ್ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಿಂದ , ಯುವಕನ ಶೋಧ ಕಾರ್ಯವು ಪೊಲೀಸರಿಗೆ ಕಷ್ಟಕರವಾಗಿ ಪರಿಣಮಿಸಿದೆ. ಜಲಪಾತದ ಬಳಿ ಯುವಕ ನಾಪತ್ತೆಯಾಗಿದ್ದ ಹೇಗೆ ಎಂಬುವ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

ಇದನ್ನೂ ಓದಿ-https://www.suddilive.in/2024/07/blog-post_973.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ