ಸುದ್ದಿಲೈವ್/ಶಿವಮೊಗ್ಗ
ಭಾರಿ ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಕಟ್ಡಡ ಮತ್ತು ತಡೆಗೋಡೆ ಕುಸಿತದ ಬಗ್ಗೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ. ನಾನೊಬ್ಬ ಶಾಸಕ ಮೇಸ್ತ್ರಿ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳಿಗೆ ಮಾತನಾಡಿರುವ ಅವರು ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬರಬಾರದು ಎಂದು ನಿರ್ಮಿಸಲಾಗಿದೆ. ಆದರೆ ಗುಡ್ಡವೇ ಕುಸಿದರೆ ಯಾರು ತಡೆಯಲು ಸಾಧ್ಯ. ಎಲ್ಲಾ ಕಟ್ಟಡ ಸುರಕ್ಷಿತವಾಗಿದೆ. ತಾಲೂಕುಪಂಚಾಯಿತಿ ಕಟ್ಟಡ ಎಲೆಕ್ಟ್ರಿಕಲ್ ವಯರ್ ನಿರ್ಮಾಣದಲ್ಲಿ ಹೋಲ್ ಆಗಿ ಲೀಕೇಜ್ ಆಗಿದೆ. ಗುತ್ತಿಗೆದಾರರು ಇನ್ನೂ ಕಟ್ಟಡ ಬಳಕೆಗೆ ಹಸ್ತಾಂತರಿಸಿಲ್ಲ. ಕಟ್ಟಡ ಸರಿಪಡಿಸುವ ಭರವಸೆಯಿದೆ.
ನಾನೇ ಕಟ್ಟಡವನ್ನ ಹಾಳು ಮಾಡಿದರೀತಿ ಆರೋಪಿಸಲಾಗುತ್ತಿದೆ. ನಾನು ಶಾಸಕ ಆದರೆ ಮೇಸ್ತ್ರಿ ಅಲ್ಲ ಎಂದು ಎದುರಾಳಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ತುಂಗ ಜಲಾಶಯಕ್ಕೆ ಹೂಳು ತುಂಬಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಮೂರು ಇಲಾಖೆಯ ಅಧಿಕಾರಿಗಳು ಸೇರಿ ಹೂಳೆತ್ತಬೇಕಿದೆ. ಸರ್ಕಾರ ಯೋಚಿಸಿ ಹೂಳೆತ್ತಬೇಕಿದೆ. ಹೂಳೆತ್ತದಿದ್ದರೆ ನೀರು ಬಳಕೆಯಾಗುವುದಿಲ್ಲ ಎಂದರು.
ನನ್ನ ಕ್ಷೇತ್ರದ ತುಂಗ ತಾಯಿಗೆ ಬಾಗಿನ ಅರ್ಪಿಸಲಾಗಿದೆ. ಜೀವನದಿ ಹೀಗೆ ಹರಿಯಲಿ, ನಾಡು ಸಂಮೃದ್ಧಿಯಾಗಲಿ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಬಿಜೆಪಿ ಕಾಲದ ಭ್ರಷ್ಠಚಾರದ ತನಿಖೆ ಮಾಡುವುದಾಗಿ ಆಡಳಿತ ಪಕ್ಷದ ನಾಯಕರು ಹೇಳಿಕೆ ನೀಡುತ್ತಿದ್ದಾರೆ.ನೀನು ಕಳ್ಳ ಎಂದರೆ ಅಲ್ಲ ನೀನು ಕಳ್ಳ ಎಂಬ ರೀತಿ ವರ್ತಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗನದ ಭ್ರಷ್ಠಾಚಾರದಲ್ಲಿ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಕಿಸಿಲ್ಲ ಎಂದು ಸಿಎಂ ಹೇಳುತ್ತಾರೆ. ಮೃತ ಚಂದ್ರಶೇಖರ್ ಪತ್ನಿಯಿಂದ ಮೂರು ಸ್ಟೇಟ್ ಮೆಂಟ್ ಪಡೆದು ಆರೋಪಿಗಳು ಸೇರಿ ಕೃತ್ಯ ನಡೆಸಿದ್ದಾರೆ ಎಂದರೂ ಹೆಸರು ಉಲ್ಲೇಖಿಸಲಿಲ್ಲ.
ಡಿವೈಎಸ್ಪಿ ಮೂಲಕ ಮತ್ತೊಂದು ಹೇಳಿಕೆಪಡೆದುಕೊಳ್ಳಲಾಗಿದೆ. ಆದರೂ ಆರೋಪಿ ಸ್ಥಾನದಲ್ಲಿ ಸಚಿವರ ಹೆಸರು ಉಲ್ಲೇಖಿಸಿದರೂ ದಾಖಲಾಗಿಲ್ಲ. ಎಸ್ಐಟಿ ಯಲ್ಲಿ ಸಚಿವರ ಆರೋಪಿಗಳ ಹೆಸರು ಇದೆ. ಆದರೆ ಮುಚ್ಚಿಹಾಕುವ ಕೆಲಸ ನಡೆಸಲಾಗುತ್ತಿದೆ.
ವಾಲ್ಮೀಕಿ ಹಗರಣದ ಹಣ ತೆಲಂಗಾಣದ ಚುನಾವಣೆಯಲ್ಲಿ ಬಳಕೆಯಾಗಿರುವುದು ಸ್ಪಷ್ಟವಾಗುತ್ತಿದೆ. ಇದನ್ನ ಇಡಿ ಉಲ್ಲೇಖಿಸಿದೆ. ವಿಧಾನ ಸಭೆಯಲ್ಲಿ ಡೆತ್ ನೋಟ್ ನ್ನ ಸಿಎಂ ಪೂರ್ಣ ಓದಲ್ಲ. ಮುಚ್ಚಾಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಮಯದಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ. ನಾವು ಭ್ರಷ್ಠಾಚಾರ ನಡೆಸಿದ್ದರೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ನನ್ನ ಕ್ಷೇತ್ರದಲ್ಲಿ ಬರುವ ತುಂಗ ನದಿ ಜಲಾಶಯಕ್ಕೆ ಇಂದು ಬಾಗಿನ ಅರ್ಪಿಸಲಾಗಿದೆ. ಜೀವನದಿ ತುಂಗೆ ಭರ್ತಿಯಾದರೂ, ತೀರ್ಥಹಳ್ಳಿಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಆಗಿದೆ. ಮಳೆ ಇನ್ಬೂ ಮಳೆ ಆಗಬೇಕಿದೆ ಎಂದರು.
ಶಾಸಕ ಚೆನ್ನಿ ಮಾತು
ಜಲಾಶಯದಲ್ಲಿ ಹೂಳೆತ್ತುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದ ಹಿರಿಯ ನಾಯಕ ಆರಗ ಜ್ಞಾನೇಂದ್ರ ಅವರ ಮಾತಿಗೆ ಕೈಜೋಡಿಸುವೆ. ಜಲಾಶಯದ ಹೂಳೆತ್ತುವ ವಿಚಾರದ ಬಗ್ಗೆ ಮೂರು ಬಾರಿ ಹೋಳೆತ್ತುವ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರೂ ಅಧಿಕಾರಿಗಳು ಒಪ್ಪಿಕೊಂಡಿಲ್ಲ.
ಮೂರು ನಾಲ್ಕು ಇಲಾಖೆ ಸೇರಿ ಹೂಳೆತ್ತಬೇಕು. ಜೀವನಾಡಿ ಆಗಿರುವ ಜಲಾಶಯ ಇದು. ನೀರು ಹೆಚ್ಚು ಸಂಗ್ರಹವಾಗಬೇಕು. ಅಧಿಕಾರಿಗಳ ಜೊತೆ ಸಭೆ ನಡೆಸಿದಾಗ ಅಧಿಕಾರಿಗಳು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಮತ್ತೆ ಈ ಬಗ್ಗೆ ಸಭೆ ನಡೆದು ಚರ್ಚೆ ಆಗಬೇಕಿದೆ. ಹಣದ ಅವಶ್ಯಕತೆ ಇದೆ.
ಇದನ್ನೂ ಓದಿ-https://www.suddilive.in/2024/07/blog-post_531.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ