ಶನಿವಾರ, ಜುಲೈ 20, 2024

ಮನೆಯ ಮೇಲೆ ಬಿದ್ದ ಮರ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ಕೀರ್ತಿನಗರದ ಮನೆಯೊಂದರ ಮೇಲೆ ಬೃಹದಾಕಾರದ ಮರದ ಕೊಂಬೆಯೊಂದು ಬಿದ್ದಿದೆ.



ಜೈಲ್ ಕಾಂಪೋಡಿನಲ್ಲಿರುವ ಈ ಮರವನ್ನು  ತೆರವು ಗೊಳಿಸುವಂತೆ ಮನೆಯ ಮಾಲಿಕ ಹರೀಶ್ ಹಲವುಬಾರಿ ಸಂಭಂದ ಪಟ್ಟ ಇಲಾಖೆಗಳಿಗೆ ಮಾನವಿ ಮಾಡಿದ್ದಾರೆ ಆದರು ಸಹ ಯಾವೋಬ್ಬ ಅಧಿಕಾರಿಯು ಇತ್ತ ಗಮನಹರಿಸಿಲ್ಲ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ. 


ಇಂದು ಬೆಳಗ್ಗೆ ಸುಮಾರು 4 ಗಂಟೆ ಸಮಯದಲ್ಲಿ ಮನೆಯಲ್ಲಿ ಮಕ್ಕಳು ಮಹಿಳೆಯರು ಗಾಡ ನಿದ್ರೆಗೆ ಜಾರಿದ ವೇಳೆ ಬೃಹದಾಕಾರದ ಮರದ ಕೊಂಬೆ ಮನೆಯಮೇಲೆ ಬಿದ್ದಿದೆ ಅದೃಷ್ಟವಶಾತ್ ಮನೆಯ ಮುಂಬಾಗದಲ್ಲಿ ಕೊಂಬೆ ಬಿದ್ದಿದ್ದರಿಂದ ಯಾವೂದೇ ಪ್ರಾಣ ಹಾನಿಯಾದ ಬಗ್ಗೆ ಮಾಹಿತಿ ದೊರೆತಿದೆ. 


ಅಲ್ಲದೆ ಜೈಲಿನ ಕಾಂಪೋಡ್ ಕೂಡ ಮನೆಯಕಡೆ ಬಾಗಿದೆ ಈ ವಿಚಾರವಾಗಿಯು ಮನೆಯ ಮಾಲಿಕರು ಜಿಲ್ಲಾಡಳಿತ, ಅರಣ್ಯ ಇಲಾಖೆ, ಪಾಲಿಕೆ ಹಾಗೂ ಜೈಲಿನ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರು ಸಹ ಯಾವೂದೆ ಪ್ರಯೋಜನವಾಗಿಲ್ಲ.


ಇನ್ನಾದರು ಸಂಭಂದ ಪಟ್ಟ ಇಲಾಕೆ ಅಧಿಕಾರಿಗಳು ಇತ್ತ ಗಮನ ಹರಿಸ ಬೇಕು ಇಲ್ಲಾವಾದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಸಂಭಂದ ಪಟ್ಟ ಇಲಾಕೆಗಳೆ ಕಾರಣವಾಗಲಿದೆ ಎಂದು ಮನೆಮಾಲಿಕರು ದೂರಿದ್ದಾರೆ.

ಇದನ್ನೂ ಓದಿ-https://www.suddilive.in/2024/07/blog-post_347.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ