ತಾಳಗುಪ್ಪದ ಸುಜನ್ ಹಾಗೂ ಸೌಮ್ಯ |
ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಪ್ರೀತಿಸಿದ ಯುವತಿಯನ್ನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮದುವೆಗೆ ಪದೇ ಪದೇ ಒತ್ತಾಯಿಸುತ್ತಿದ್ದ ಯುವತಿಯನ್ನ ಕೊಲೆ ಮಾಡಿರುವ ಯುವಕನನ್ನ ಕೊಪ್ಪ ಪೊಲೀಸರ ಕಾರ್ಯಾಚರಣೆ ರೋಚಕವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಚ್ಚರಡಿ ಗ್ರಾಮದ ನಿವಾಸಿ ಯುವತಿ ಸೌಮ್ಯ(27) ಜು.2 ರಂದು ಆರೋಗ್ಯ ತರಬೇತಿ ಇದೆ ಎಂದು ಮನೆಯಲ್ಲಿ ಹೇಳಿ ಹೋದವಳು ಮನೆಗೆ ಬಾರದ ಹಿನ್ನಲೆಯಲ್ಲಿ ಯುವತಿಯ ತಾಯಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದೂರು ದಾಖಲಿಸಿದ್ದಾರೆ.
ಮೊಬೈಲ್ ಸ್ವಿಚ್ ಆಫ್
ತರಬೇತಿಗೆಂದು ಬಂದಿದ್ದ ಯುವತಿ ಸೌಮ್ಯ ತಾಳುಗುಪ್ಪದ ಸುಜನ್ ಎಂಬುವರನ್ನ ಭೇಟಿ ಮಾಡಲು ಸಾಗರಕ್ಕೆ ಬಂದಿರುತ್ತಾಳೆ. ಈ ಬಗ್ಗೆ ತಾಯಿಗೆ ಗೊತ್ತಿರುತ್ತದೆ. ತಾಯಿಗೆ ಗೊತ್ತಿದ್ದ ಕಾರಣ ಯುವತಿಯ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ಮಗಳು ಇಷ್ಟು ಹೊತ್ತು ಮನೆಗೆ ಬಂದಿಲ್ಲ. ಇನ್ನೊಂದು ಕಡೆ ಮೊಬೈಲ್ ಸ್ವಿಚ್ ಬಂದ ಕಾರಣ ಯುವತಿಯ ಪೋಷಕರು ಸುಜನ್ ಗೆ ಕರೆ ಮಾಡುತ್ತಾರೆ.
ಸುಜನ್ ಸಹ ಸಾಗರದಲ್ಲಿ ಭೇಟಿಯಾದ ಸೌಮ್ಯಳಿಗೆ ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿಕಳುಹಿಸಿರುವೆ ಎಂದು ತಿಳಿಸುತ್ತಾನೆ. ಮನೆಗೆ ಬಾರದ ಸೌಮ್ಯಳ ಬಗ್ಗೆ ಕೊಪ್ಪದ ಪೊಲೀಸ್ ಠಾಣೆಗೆ ಸೌಮ್ಯಳ ತಾಯಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿರುತ್ತಾರೆ.
ಪ್ರಕರಣ ಪತ್ತೆಯಾಗಿದ್ದೆ ಸಿಡಿಆರ್ ನಿಂದ
ಪೊಲೀಸರು ಯುವತಿ ಹುಡುಕಲು ಆರಂಭಿಸುತ್ತಾರೆ. ಪತ್ತೆಯಾಗಿರುವುದಿಲ್ಲ ಜು.02 ಕ್ಕೆ ನಡೆದಿರುತ್ತೆ. ಜು.03 ರಿಂದ 19 ರವರೆಗೆ ಕಾಣೆಯಾದ ಯುವತಿಯ ಬಗ್ಗೆ ಏನೂ ಪತ್ತೆಯಾಗಿರುವುದಿಲ್ಲ. ಯಾವಾಗ ಎಎಸ್ಐ ನಿಂದ ಫೈಲ್ ಪಡೆದುಕೊಂಡ ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಶಿವರುದ್ರಮ್ಮ ಯುವತಿಯ ಮೊಬೈಲ್ ಪರಿಶೀಲಿಸಿದ್ದಾರೆ.
ಯುವತಿಯ ಮೊಬೈಲ್ ಸಿಡಿಆರ್ ಪರಿಶೀಲಿಸಿದಾಗ ಯುವಕ ಸುಜನ್ ಗೆ ಪದೇ ಪದೇ ಕರೆ ಮಾಡಿರುವುದು ತಿಳಿದು ಬರುತ್ತದೆ. ಯಾವಾಗ ಸುಜನ್ ಹೇಳಿಕೆಯನ್ನ ಮೊಬೈಲ್ ನಲ್ಲೇ ಪರಿಶೀಲಿಸಿದ ಪಿಎಸ್ಐಗೆ ಅನುಮಾನ ಹುಟ್ಟೋದೇ ಈ ವೇಳೆ. ಆತನ ಹೇಳಿಕೆಗೂ, ಮೊಬೈಲ್ ಸಿಡಿಆರ್ ಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿರುತ್ತದೆ.
ವಿಚಾರಣೆಯಲ್ಲಿ ಯುವಕ ಲಾಕ್
ಅಜಗಜಾಂತರ ವ್ಯತ್ಯಾಸದ ಬೆನ್ನಲ್ಲೇ ಸುಜನ್ ಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತದೆ. ವಿಚಾರಣೆಗೆ ಬಂದಿದ್ದ ಸುಜನ್ ಪೊಲೀಸರ ಕೈಲಿ ಲಾಕ್ ಆಗಿದ್ದಾನೆ. ಕೊಲೆಯ ಸಂಪೂರ್ಣ ಮಾಹಿತಿ ಬಾಯಿ ಬಿಟ್ಟಿದ್ದಾನೆ. ಕೊಲೆ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ.
ಲವ್ ಆಗಿದ್ದು ಹೇಗೆ?
ಭಾರತ್ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸುಜನ್ 2021 ರಲ್ಲಿ ತೀರ್ಥಹಳ್ಳಿಯಲ್ಲಿ ಕಲೆಕ್ಷನ್ ಕೆಲಸ ಮಾಡುತ್ತಿದ್ದಾಗ, ಕೊಪ್ಪಕ್ಕೂ ಕಲೆಕ್ಷನ್ ಗೆ ಹೋಗಿ ಬರುತ್ತಿದ್ದ. ಸೌಮ್ಯಳ ತಾಯಿ ಫೈನಾನ್ಸ್ ನಿಙದ ಸಾಲ ಪಡೆದಿರುತ್ತಾರೆ. ಕಲೆಕ್ಷನ್ ಗೆ ಹೋಗಿದ್ದ ಸುಜನ್ ಗೆ ಸೌಮ್ಯ ಪರಿಚಯವಾಗುತ್ತಾಳೆ. ಪರಿಚಯ ಸಲುಗೆಗೆ ತಿರುಗುತ್ತದೆ. ಸಲುಗೆ ಪ್ರೀತಿಗೆ ದಾರಿ ಮಾಡಿಕೊಟ್ಟಿತ್ತು.
ಯುವತಿ ದಲಿತ ಸಮುದಾಯದವಳಾದರೆ ಯುವಕನದ್ದು ಬೇರೆಯೇ ಜಾತಿಯಾಗಿರುತ್ತದೆ. ಇವರಿಬ್ಬರ ನಡುವಿನ ಪ್ರೀತಿಯನ್ನ ಸೌಮ್ಯಳ ತಾಯಿಗೆ ತಿಳಿದಿರುತ್ತದೆ. ಮದುವೆ ಮಾಡಿಕೊಳ್ಳಲು ಒಪ್ಪಿದ್ದರೂ ಸುಜನ್ ಈಗಲೇ ಮದಿವೆ ಬೇಡ ಮನೆಯ ಜವಬ್ದಾರಿ ಇದೆ ಎಂದು ಹೇಳಿ ಮುಂದೆ ಹಾಕಿರುತ್ತಾನೆ.
ಯುವತಿಯ ಉಸಿರುಗಟ್ಟಿಸಿ ಕೊಲೆ
ಮೂರು ನಾಲ್ಕು ವರ್ಷದಿಂದ ಯುವತಿ ಮದುವೆಯಾಗು ಎನ್ನುತ್ತಾ ಬಂದರೂ ಮದುವೆ ಈಗ ಬೇಡ ಎಂದು ಸುಜನ್ ಮುಂದೂಡುತ್ತಾ ಬಂದಿದ್ದಾನೆ. ಜು.02 ರಂದು ಹೊಸನಗರ ತಾಲೂಕಿನ ಹೆದ್ದಾರಿಪುರ ದಿಂದ ಸಾಗರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನ ಕಂಡು ನಿಲ್ಲಿಸಿದ ಸುಜನ್ ಸೌಮ್ಯಳ ಬಳಿ ಮಾತನಾಡುತ್ತಾನೆ.
ಸೌಮ್ಯಳ ಜೊತೆ ಮಾತನಾಡಿದ ವೇಳೆ ಮದುವೆಗೆ ಒತ್ತಾಯಿಸಿದ ಕಾರಣ ಕುತ್ತಿಗೆಗೆ ಬಲವಾಗಿ ಪಂಚ್ ಮಾಡುತ್ತಾನೆ. ಹೊಡೆತ ಬಿದ್ದ ಸೌಮ್ಯ ಕುಸಿದು ಬೀಳುತ್ತಾನೆ. ಕುತ್ತಿಗೆಯನ್ನ ಹಿಸುಕಿ ಸಾಯಿಸಿದ್ದಾನೆ. ತಾಳಗುಪ್ಪಕ್ಕೆ ಹೋಗಿ ತನ್ನ ಕಾರು ತಂದು ಮೃತ ಸೌಮ್ಯಳನ್ನ ಕಾರಿನಲ್ಲಿ ಹಾಕಿಕೊಂಡು ಹೋಗಿ ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿ ಚರಂಡಿಗೆ ತೆಗೆದ ಮಣ್ಣಿನಲ್ಲಿ ಹಾಕಿ ಕೈಯಿಂದಲೇ ಮಣ್ಣು ಮುಚ್ಚಿದ್ದಾನೆ.
ಪದೇ ಪದೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಯುವತಿಯನ್ನ ಕೊಲೆ ಮಾಡಿ ಬಾಯಿಮುಚ್ಚಿಸಲು ಯತ್ನಿಸಿದ ಯುವಕನನ್ನ ಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_237.html