ಗುರುವಾರ, ಜುಲೈ 25, 2024

ಜಿಲ್ಲೆಯ ಪ್ರಮುಖ ನದಿಗಳ ಜಲಾಶಯದ ನೀರಿನ ಮಟ್ಟ

ಲಿಂಗನಮಕ್ಕಿ ಜಲಾಶಯ


 ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯಲ್ಲಿ ಕಳೆದರೆಡು ದಿನಗಳಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಜಿಲ್ಲೆಯ ನದಿಗಳ ಒಳಹರಿವು ಕಡಿಮೆಯಾಗುತ್ತು. ಕಳೆದ 24 ಗಂಟೆಯಲ್ಲಿ ಮಳೆ ಚುರುಕಾದ್ದರಿಂದ ಮತ್ತೆ ನದಿಗಳ ಒಳಹರಿವು ಹೆಚ್ಚಾಗಿದೆ.   


ಭದ್ರ ಡ್ಯಾಂನ (reservoir) ನೀರಿನ ಮಟ್ಟ 171 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ ಸರಿಸುಮಾರು ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ (bhadra dam water level) 152. 9 ಅಡಿ ನೀರು ಶೇಖರಣೆಯಾಗಿತ್ತು.


ಭದ್ರಾ ಡ್ಯಾಂ ಗರಿಷ್ಠ ಮಟ್ಟ ತಲುಪಲು  ಇನ್ನೂ ಹದಿನಾಲ್ಕುವರೆ ಅಡಿಯಷ್ಟು ನೀರು ಹರಿದುಬರಬೇಕಾಗಿದೆ. ಪ್ರಸ್ತುತ ಜಲಾನಯನ ಪ್ರದೇಶ  ವ್ಯಾಪ್ತಿಯಲ್ಲಿ ಮತ್ತೆ ಮಳೆ  ಚುರುಕುಗೊಂಡಿದೆ. ಇದರಿಂದ ಪ್ರಸ್ತುತ ವರ್ಷ ಡ್ಯಾಂ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಗಳು ಕಂಡುಬರುತ್ತಿವೆ.


ತುಂಗ ನದಿಯ ಒಳಹರಿವು ಮತ್ತೆ ಹೆಚ್ಚಳವಾಗಿದೆ. ನಿನ್ನೆ ರಾತ್ರಿ 35 ಸಾವಿರ ಕ್ಯೂಸೆಕ್ ಗೆ ಕುಸಿದಿದ್ದ ಒಳಹರಿವು ರಾತ್ರಿಯ ಮಳೆಗೆ ಮತ್ತೆ ಹೆಚ್ಚಳವಾಗಿದೆ. ಇಂದು ಬೆಳಿಗ್ಗೆ ಜಲಾಶಯಕ್ಕೆ 53 ಸಾವಿರ ಕ್ಯೂಸೆಕ್ ಒಳಹರಿವಿದೆ. ಅಷ್ಟೇ ಪ್ರಮಾಣದ ನೀರನ್ನ ನದಿಗೆ ಹರಿಸಲಾಗುತ್ತಿದೆ. 10 ಗೇಟನ್ನ 1½ ಅಡಿ ಎತ್ತರ ಏರಿಸಲಾಗಿದೆ. ಉಳಿದ 11 ಗೇಟನ್ನ ಅರ್ಧ ಅಡಿ ಏರಿಸಿ ನೀರನ್ನ ನದಿಗೆ ಬಿಡಲಾಗುತ್ತಿದೆ. 


ಅದರಂತೆ ಲಿಂಗನಮಕ್ಕಿ ಜಲಶಯಕ್ಕೆ 53,371 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಅಡಿ ನೀರಿನ ಸಾಮರ್ಥ್ಯದ ಜಲಾಶಯದಲ್ಲಿ ಇಂದು 1802.70 ಅಡಿ ನೀರು ಸಂಗ್ರಹವಾಗಿದೆ. ನಿನ್ನೆ 1801 ಅಡಿ ತಲುಪಿದ್ದ ಜಲಾಶಯ ಯಾವಾಗ ಬೇಕಾದರೂ ತುಂಬುವ ಸಾಧ್ಯತೆ ಮೇರೆಗೆ ನದಿಪಾತ್ರದ ಜನರಿಗೆ ಕೆಪಿಸಿಎಲ್ ಮುನ್ನಚ್ಚರಿಕೆ ನೀಡಿತ್ತು. ಕಳೆದ ವರ್ಷ 1778.85 ಅಡಿ ನೀರು ಸಂಗ್ರಹವಾಗಿತ್ತು.

ಇದನ್ನೂ ಓದಿ-https://www.suddilive.in/2024/07/blog-post_246.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ