ಕೌನ್ಸಲಿಂಗ್ ನಡೆಯುತ್ತಿರುವ ಕೊಠಡಿ |
ಸುದ್ದಿಲೈವ್/ಶಿವಮೊಗ್ಗ
ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಇಂದು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ.
ಮೀನಾಕ್ಷಿ ಭವನದ ಪಕ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆಯುತ್ತಿದ್ದು, ಇಲ್ಲಿ ವರ್ಗಾವಣೆಗಾಗಿ ಕೌನ್ಸಿಲಿಂಗ್ ಗೆ ಬಂದ ಪ್ರಾಥಮಿಕ ಶಿಕ್ಷಕರು ಪ್ರತಿಭಟನೆಗೆ ಇಳಿದು ಕೌನ್ಸಿಲಿಂಗ್ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಕಳೆದ 25 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಹೊರ ಊರುಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದು ಇವರೆಲ್ಲರೂ ವರ್ಗಾವಣೆಗಾಗಿ ಜಾತಕ ಪಕ್ಷಿಯಂತೆ ಕಾಯತ್ತಿದ್ದರೂ ವರ್ಗಾವಣೆ ಮಾತ್ರ ದೊರೆತಿಲ್ಲ ಎಂದು ಶಿಕ್ಷಕರು ಅರೊಪಿಸಿದ್ದಾರೆ.
ನಿಲ್ಲಿಸಿ ನಿಲ್ಲಿಸಿ ಕೌನ್ಸಿಲಿಂಗ್ ನಿಲ್ಲಿಸಿ, ಅಯ್ಯೋಯ್ಯೋ.. ಅನ್ಯಾಯ ಎಂದು ಶಿಕ್ಷಕರು ಘೋಷಣೆ ಕೂಗಿದ್ದಾರೆ.
6,7,8 ನೇ ತರಗತಿಗಳಿಗೆ ಪ್ರಾಥಮಿಕ ಶಿಕ್ಷಕರನ್ನೇ ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನ ನೇಮಕ ಮಾಡಿಲ್ಲ. ಹಾಗಾಗಿ 2017 ರಲ್ಲಿ ಜಾರಿಗೆ ಆದ ಸಿ ಅಂಡ್ ಆರ್ ತಿದ್ದುಪಡಿ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
ಇದು ವರೆಗೂ 271 ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆದಿದೆ. ಈ ಕೌನ್ಸಿಲಿಂಗ್ ನ್ನ ಪ್ರತಿಭಟನಾಕಾರರು ನಿಲ್ಲಿಸುವಂತೆ ಶಿಕ್ಷಕರು ಆಗ್ರಹಿಸಿದರೂ ಕೌನ್ಸಿಲಿಂಗ್ ಮುಂದು ವರೆದಿದೆ.
ಇದನ್ನೂ ಓದಿ-https://www.suddilive.in/2024/07/blog-post_383.html