ಸುದ್ದಿಲೈವ್/ಶಿವಮೊಗ್ಗ
ಶಿಮೂಲ್ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಗೆ 14ದಿನ ಬಾಕಿ ಇದ್ದು, ಈಗಾಗಲೇ 14 ಜನ ನಾಮಪತ್ರ ಸಲ್ಲಿಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡರು ಶಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಮುಂದಿನ ಐದು ವರ್ಷಕ್ಕೆ ಶಿಮುಲ್‌ನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಯಾಗಲಿದೆ. ಜುಲೈ 30ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು. ನಿನ್ನೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇಂದು 13 ನಾಮಪತ್ರ ಸಲ್ಲಿಕೆಯಾಗಿದೆ.
ಆಗಸ್ಟ್ 6ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆ.8ರಂದು ನಾಮಪತ್ರ ವಾಪಸ್ ಪಡೆಯಬಹುದಾಗಿದೆ. ಆ.14ರಂದು ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಚುನಾವಣ ಅಧಿಕಾರಿಯಾಗಿ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರನ್ನು ನೇಮಿಸಲಾಗಿದೆ.
ನಾಮಪತ್ರ ಸಲ್ಲಿಸಿದ ಆಕಾಂಕ್ಷಿಗಳು
ಶಿವಮೊಗ್ಗ, ದಾವಣಗೆರೆ ಹಾಗು ಚಿತ್ರದುರ್ಗ ಜಿಲ್ಲೆಯಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು ಶಿವಮೊಗ್ಗ ವಿಭಾಗದಿಂದ ತೀರ್ಥಹಳ್ಳಿಯ ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆರ್ ಎಂ ಮಂಜುನಾಥ್ ಗೌಡ, ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಎಸ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ಸಾಗರ ವಿಭಾಗದಿಂದ ದೊಡ್ಡಜೋಗಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬಿ.ಡಿ.ಭೂಕಾಂತ್, ಸೊರಬ ತಾಲೂಕಿನ ಹಿರೇಮಾಗಡಿ ಹಾಲು ಉತ್ಪಾದಕರ ಸಂಘದಿಂದ ಗಂಗಾಧರಪ್ಪ, ಸಾಗರ ತಾಲೂಕಿನ ಸಂಗಣ್ಣನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ದಿವಾಕರ್, ಆವಿನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಹೆಚ್ ಎಂ ರವಿಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ದಾವಣಗೆರೆಯ ನ್ಯಾಮತಿ ತಾಲೂಕಿನ ಕುರುವ ಹಾಲು ಉತ್ಪಾದಕರ ಸಂಘದಿಂದ ಸುರೇಶ್ ಕೆ.ಜಿ, ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಹೆಚ್ ಕೆ ಬಸಪ್ಪ, ಚಿತ್ರದುರ್ಗದ ಹಿರಿಯೂರು ತಾಲೂಕಿನ ಬಬ್ಬೂರು ಹಾಲು ಉತ್ಪಾದಕರ ಸಂಘದಿಂದ ಯಶವಂತರಾಜು, ಚಿತ್ರದುರ್ಗದ ಸಿರಿಗೆರೆ ಹಾಲು ಉತ್ಪಾದಕರ ಸಂಘದಿಂದ ಪಿ.ತಿಪ್ಪೇಸ್ವಾಮಿ,
ಹೊಸದುರ್ಗದ ಕೊರಟೀಕೆರೆ ಹಾಲು ಉತ್ಪಾಕರ ಸಂಘದಿಂದ ರಮೇಶಪ್ಪ, ಹೊಳಲ್ಕೆರೆಯ ಮಾಳೇನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಜಿ.ಆರ್.ಮಂಜುನಾಥ್, ಚಿತ್ರದುರ್ಗದ ಸಿದ್ದಾಪುರ ಹಾಲು ಉತ್ಪಾದಕರ ಸಂಘದಿಂದ ಪಿ.ಎಸ್.ಗುರುಶಾಂತಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_152.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ