ಸುದ್ದಿಲೈವ್/ತೀರ್ಥಹಳ್ಳಿ
ಆಗುಂಬೆ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ನಿರಂತರ ಮಳೆಯಿಂದಾಗಿ ಆಗುಂಬೆ ಘಾಟಿ ಕುಸಿತವಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ಮಳೆಗಾಲದಲ್ಲಿ ಕುಸಿತಕ್ಕೊಳಗಾಗುತ್ತಿದೆ. ಈ ಹಿನ್ಬಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನ ಈಗಾಗಲೇ ರದ್ದುಗೊಳಿಸಕಾಗಿದೆ.
ಶಿವಮೊಗ್ಗ ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯ 5 ನೇ ಸುತ್ತಿನಲ್ಲಿ ಗುಡ್ಡ ಸ್ವಲ್ಪ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆ ಕೂಡ ಆರನೇ ಸುತ್ತಿನಲ್ಲಿ ಘಾಟಿ ಕುಸಿದಿತ್ತು
ಘಾಟಿ ಕುಸಿದ ಪರಿಣಾಮ ವಾಹನ ಸಂಚಾರಕ್ಕೆ ಪರದಾಟ ಆರಂಭವಾಗಿದೆ. ಭಾನುವಾರವಾದುದರಿಂದ ಈ ಘಾಟಿಯಲ್ಲಿ ಓಡಾಟ ಹೆಚ್ಚಾಗಿರುತ್ತದೆ. ಇನ್ನಷ್ಟು ಘಾಟಿ ಕುಸಿಯುವ ಸಾಧ್ಯತೆಯಿದೆ ಎಂದು ಸ್ಥಳೀಯರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಘಾಟಿ ಕುಸಿದ ಪರಿಣಾಮ ರಸ್ತೆಯ ಮೇಲೆ ಮಣ್ಣು ಮತ್ತು ಕಲ್ಲುಗಳು ಹರಡಿಕೊಂಡಿವೆ. ಘಾಟಿಯಲ್ಲಿ ಗುಡ್ಡ ಕುಸಿದ ಹಿನ್ನೆಲೆ ತೆರವು ಕಾರ್ಯಚರಣೆ ಆರಂಭಗೊಂಡಿದೆ.
ಇದನ್ನೂ ಓದಿ-https://suddilive.in/archives/19214
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ