ಸುದ್ದಿಲೈವ್/ಶಿವಮೊಗ್ಗ
ಮುಸ್ಲಿಂ ಹಾಸ್ಟೆಲ್(ವಕ್ಫ್) ವಸತಿ ವಿದ್ಯಾರ್ಥಿಗಳ ಸಮಸ್ಯೆಗೆ ತುರ್ತು ಪರಿಹಾರ ನೀಡುವಂತೆ ಆಗ್ರಹಿಸಿ ಎಸ್ ಡಿಪಿಐ ಜಿಲ್ಲಾ ವಕ್ಫ್ ಸಮಿತಿಗೆ ಮನವಿ.ನೀಡಿದೆ
ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಮುಸ್ಲಿಂ ಹಾಸ್ಟೆಲ್ (ವಕ್ಫ್) ನಲ್ಲಿ ಬಡ ವಿದ್ಯಾರ್ಥಿಗಳಿಗೆ ಕೊಠಡಿಗಳಲ್ಲಿ ಮಳೆ ಬಂದಾಗ ಮೇಲ್ಚಾವಣಿ ಸೋರುವ ಸಮಸ್ಯೆ ಉಂಟಾಗುತ್ತಿದೆ,
ಕಟ್ಟಡ ದುರಸ್ತಿ ಆಗದೆ ಇರುವುದು, ಡೆಂಗ್ಯೂ ಜ್ವರ ವೇಗವಾಗಿ ಹರಡುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ ನೀಡಬೇಕು. ಸ್ವಚ್ಛ ವಾತಾವರಣ ನಿರ್ಮಾಣವಾಗಬೇಕು.
ಈ ಎಲ್ಲಾ ಬೇಡಿಕೆಯನ್ನ ತಕ್ಷಣವೇ ಈಡೇರಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಆಡಳಿತ ಅಧಿಕಾರಿಗೆ ಮನವಿ ನೀಡಲಾಯಿತು.
ಇದನ್ನೂ ಓದಿ-https://suddilive.in/archives/19222
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ