ಸುದ್ದಿಲೈವ್/ಶಿವಮೊಗ್ಗ
24 ಗಂಟೆಯಲ್ಲಿ ಮಳೆಯ ಪ್ರಮಾಣ ಕುಸಿತವಾದ ಹಿನ್ನಲೆಯಲ್ಲಿ ಭೋರ್ಗೆರೆಯುವ ಹಂತಕ್ಕೆ ತಲುಪಿದ ನದಿಗಳ ಶಾಂತವಾಗಿ ಹರಿಯುತ್ತಿವೆ. ತುಂಗ, ಭದ್ರ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿವೆ.
ಗಾಜನೂರಿನ ತುಂಗ ಜಲಾಶಯಕ್ಕೆ ನಿನ್ನೆ ಬೆಳಿಗ್ಗೆ 70 ಸಾವಿರ ಕ್ಯೂಸೆಕ್ ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ 38086 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 21 ಗೇಟಿನ ಮೂಲಕ ನದಿಗೆ 34498 ಕ್ಯೂಸೆಕ್ ನೀರನ್ನ ಹರಿಸಲಾಗುತ್ತಿದೆ. ಉಳಿದಿದ್ದನ್ನ ಚಾನೆಲ್ ಗಳ ಮೂಲಕ ಹರಿಸಲಾಗುತ್ತಿದೆ.
ಭದ್ರ ಜಲಾಶಯಕ್ಕೆ ನಿನ್ನೆ ಬೆಳಿಗ್ಗೆ 25ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ 18381 ಸಾವಿರ ಕ್ಯೂಸೆಕ್ ಒಳಹರಿವಿದೆ. ನಿನ್ನೆ 180 ಅಡಿ ನೀರು ಸಂಗ್ರಹವಾಗಿದ್ದ ಭದ್ರ ಜಲಾಶಯದಲ್ಲಿ ಇಂದು 181.1 ಅಡಿ ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿಯಲ್ಲೂ ಒಳಹರಿವು ಕಡಿಮೆಯಾಗಿದೆ. ನಿನ್ನೆ ಬೆಳಿಗ್ಗೆ 35 ಸಾವಿರ ಕ್ಯೂಸೆಕ್ ನೀರು ಒಳಹರಿವಿತ್ತು. ಇಂದು ಬೆಳಿಗ್ಗೆ 40382 ಕ್ಯೂಸೆಕ್ ನೀರು ಒಳಹರಿವಿದೆ. 1819 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ನಿನ್ನೆ 1808.05 ಅಡಿ ನೀರು ಸಂಗ್ರಹವಾಗಿತ್ತು. ಇಂದು 1809.2 ಅಡಿ ನೀರು ಸಂಗ್ರಹವಾಗಿದೆ. 151.64 ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ ಸಧ್ಯಕ್ಕೆ 120.60ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_949.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ