ಸುದ್ದಿಲೈವ್/ಶಿವಮೊಗ್ಗ
ಅಲ್ಪಸಂಖ್ಯಾತರ ಮತದಿಂದ ಗೆದ್ದ ಕಾಂಗ್ರೆಸ್ ಅಲ್ಪ ಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ. ಅಲ್ಪ ಸಂಖ್ಯಾತರರಿಗೆ ಮೀಸಲಿಟ್ಟಿದ್ದ 1392 ಕಾಮಗಾರಿಗೆ ಮೀಸಲಿಟ್ಟ ಹಣದಲ್ಲಿ ಸಿಎಂ ಅದೇಶದ ಮೇರೆಗೆ 312 ಕೋಟಿ ರೂ ಕತ್ತರಿ ಬಿದ್ದಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದನ್ನು ಸಿಎಂ ಅದೇಶ ಮಾಡಿದ್ದಾರೆ. ಅದನ್ನು ವಾಪಸ್ ಪಡೆಯಬೇಕು. ಹೆಚ್.ಸಿ.ಮಹಾದೇವಪ್ಪನವರು ಎಸ್ಸಿ/ ಎಸ್ಟಿ ಓಬಿಸಿ ಹಣ ಅ ಸಮುದಾಯಕ್ಕೆ ತಲುಪಿದೆ ಎಂದು ಹೇಳಿದ್ದಾರೆ. ಎಸ್ಸಿ/ ಎಸ್ಟಿ ಮತ್ತು ಓಬಿಸಿ ರವರಿಗೆ ಮೀಸಲಿಟ್ಟ ಹಣವನ್ನು ಅದಕ್ಕೆ ವಿನಿಯೋಗ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಲಿ ಎಂದರು.
ಈಶ್ವರಪ್ಪನವರಿಗೆ ಬರಲು ಹೇಳಿ ಜಮೀರ್ ವಿದೇಶಕ್ಕೆ
ಶಿವಮೊಗ್ಗದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಯಲ್ಲಿ ಬಡವರಿಗಾಗಿ 288 ಮನೆ ಮಾತ್ರ ನೀಡಲಾಗಿದೆ. ಇದಕ್ಕಾಗಿ ಸಂಬಂಧ ಪಟ್ಟ ಸಚಿವರ ಭೇಟಿಗಾಗಿ ನಾನು ಬೆಂಗಳೂರಿಗೆ ಹೋದಾಗ ಅವರ ಕಚೇರಿಗೆ ಹೋದಾಗ ಅವರು ವಿದೇಶಕ್ಕೆ ಹೋಗಿದ್ದಾರೆಂದು ಹೇಳಿದ್ರು, ನಮಗೆ ಬರಲು ಹೇಳಿ ಅವರು ವಿದೇಶಕ್ಕೆ ಹೋಗಿದ್ದು ಸರಿ ಅಲ್ಲ,
ಇದರಿಂದ ನಾನು ಜಮೀರ್ ಅಹಮದ್ ಗೆ ಎಚ್ಚರಿಕೆ ನೀಡುತ್ತಿದ್ದೇನೆ, ಅವರು ತಕ್ಷಣ ಶಿವಮೊಗ್ಗಕ್ಕೆ ಬರಬೇಕು. ಇಲ್ಲಿನ ಆಶ್ರಯ ಮನೆ ನಿರ್ಮಾಣಕ್ಕೆ ವೇಗ ನೀಡಬೇಕು. ಜಮೀರ್ ಅಹಮದ್ ರವರು ಹೋರಾಟಕ್ಕೆ ಅವಕಾಶ ನೀಡಬಾರದು ಇಲ್ಲವೆಂದರೆ ಅವರ ವಿರುದ್ಧವೇ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮದುವೆಗೆ ಹಣ, ಆಸ್ಪತ್ರೆಯ ಖರ್ಚನ್ನು ಸಹ ನೀಡಿಲ್ಲ. ಈ ಕುರಿತು ಮನವಿ ಮಾಡಿದಾಗ ಸಚಿವ ಸಂತೋಷ್ ಲಾಡ್ ಭೇಟಿ ಮಾಡಿದ್ದೆವೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಉಪ ಚುನಾವಣೆ ದೃಷ್ಟಿಯಿಂದ ರಾಮನಗರ ಹೆಸರನ್ನು ಬದಲಾಯಿಸಲಾಗಿದೆ. ರಾಮನ ಹೆಸರು ಕಾಂಗ್ರೆಸ್ ನವರಿಗೆ ಕನಸಿನಲ್ಲಿ ಬರಲಿದೆಯೇ. ಕೇವಲ ಒಂದು ಸಮಾಜಕ್ಕೆ ತೃಪ್ತಿ ಪಡಿಸಲು ಹೀಗ ಮಾಡದೆ ರಾಮನಗರ ಹೆಸರನ್ನು ಪುನಃ ಇಡಬೇಕೆಂದು ಆಗ್ರಹಿಸಿದರು.
ಮಧು ಬಂಗಾರಪ್ಪನವರ ಹೇಳಿಕೆಗೆ ಸ್ವಾಗತ
ಮಧು ಬಂಗಾರಪ್ಪ ಹೇಳಿಕೆಯನ್ನು ಸ್ವಾಗತ ಮಾಡುತ್ತೆನೆ. ಅವರು ಬಿದ್ದ ಅಕ್ರಮ- ಸಕ್ರಮ ಮನೆಗಳಿಗೆ ಹಣ ನೀಡುವ ಹೇಳಿಕೆ ಸ್ವಾಗತರ್ಹ ಎಂದ ಈಶ್ವರಪ್ಪ ಸರ್ಕಾರ ಸತ್ತು ಹೋಗಿದೆ. ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಹಳೇ ಕಾಮಗಾರಿ ನಿಲ್ಲಿಸಿದ್ದಾರೆ. ಸರ್ಕಾರ ಬಿಜೆಪಿ ಮೇಲೆ ಬೈಯುವುದರಲ್ಲಿಯೇ ನಿರತರಾಗಿದ್ದಾರೆ.
ಕಾಂಗ್ರೆಸ್ ನವರು ನಾಲ್ಕು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ವಾಲ್ಮೀಕಿ ಹಗರಣ, ಮುಡಾ ಹಗರಣ, ಅಪೆಕ್ಸ್ ಬ್ಯಾಂಕ್ , ಭೋವಿ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಹಗರಣವಾಗಿದೆ. ಸದನದಲ್ಲಿ ಸಿಎಂ ಉತ್ತರವೇ ಕೊಡಲಿಲ್ಲ. ಮುಡಾ ಪಾದಯಾತ್ರೆಗೆ ಕಾಂಗ್ರೆಸ್ ಬ್ಲಾಕ್ ಮೇಲ್ ಮಾಡ್ತಾ ಇದೆ. ಡಿಸಿಎಂ ಶಿವಕುಮಾರ್ ವಿಜಯೇಂದ್ರ ವಿದೇಶಕ್ಕೆ ಹಣ ವರ್ಗಾವಣೆ ವಿಚಾರ ಹೊರಗೆ ತರುವುದಾಗಿ ಹೇಳಲಿದ್ದಾರೆ.
ನೀವೇ ನಿಮ್ಮ ಬಳಿ ಇರುವ ಸಂಸ್ಥೆಯಿಂದ ತನಿಖೆ ನಡೆಸಿ, ಇಲ್ಲದೆ ಸಿಬಿಐ ನಿಂದ ನಿಮ್ಮ ಸರ್ಕಾರದ ಹಗರಣವನ್ನು ತನಿಖೆಗೆ ನೀಡಿ ಎಂದರು. ಹಗರಣಗಳನ್ನು ಎಷ್ಟು ದಿನ ಮುಚ್ಚಿಟ್ಟು ಕೊಂಡಿರುತ್ತಿರಿ ಎಂದು ಪ್ರಶ್ನಿಸಿದರು. ಮೋದಿ ಹಾಗೂ ನಿರ್ಮಲ ಸೀತರಾಮನ್ ಬಗ್ಗೆ ಹಾದಿಯಲ್ಲಿ ಹೋಗುವ ದಾಸಯ್ಯರಂತೆ ಮಾತನಾಡುತ್ತಿದ್ದಾರೆ. ಸಿಬಿಐ ತನಿಖೆಗೆ ವಹಿಸಿದರೆ ಸಿಎಂ ರವರೆ ನಿಮ್ಮ 40 ವರ್ಷದ ರಾಜಕೀಯ ಜೀವನದ ಹಗರಣ ಬಯಲಿಗೆ ಬರಲಿದೆ ಎಂಬ ಭಯವೇ ಎಂದು ಪ್ರಶ್ನಿಸಿದರು.
ವಾಲ್ಮೀಕಿ ಹಗರಣ ಸಿಬಿಐಗೆ ವಹಿಸಿ-ಭಂಡತನ ಬಿಡಿ
ವಾಲ್ಮೀಕಿ ನಿಗಮದ ಹಗರಣದ ಕುರಿತು ಒಬ್ಬನೆ ಚಿಂತಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನವರು ಭಂಡ ಉತ್ತರ ನೀಡದೆ ಸಿಬಿಐಗೆ ತನಿಖೆಗೆ ವಹಿಸಬೇಕೆಂದರು. ಕಳ್ಳನ ಹೆಂಡತಿ ಯಾವತ್ತು ಇದ್ದರು ಮುಂಡನೇ ಎಂದರು.
ಇದನ್ನೂ ಓದಿ-https://www.suddilive.in/2024/07/blog-post_437.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ