ಗುರುವಾರ, ಜುಲೈ 11, 2024

ಮೂಡಾ ಸೈಟ್ ಹಂಚಿಕೆ ವಿಚಾರದಲ್ಲಿ ಸಿಎಂ ರಾಜೀನಾಮೆ ನೀಡಲಿ-ಮೇಘರಾಜ್ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಮೂಡಾ ಸೈಟ್ ನ್ನ ಸಿಎಂ ಪತ್ನಿಗೆ ನೀಡಿವ ವೇಳೆ ಎಲ್ಲಾ ಕಾನೂನು ಉಲ್ಲಂಘಿಸಿ ನಡೆದಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ 2009 ರ ನಂತರದ ಭೂಸ್ವಾಧೀನ ನಿಯಮ ಉಲ್ಲಂಘಿಸಲಾಗಿದೆ.  ಸರ್ಕಾರ ಒಂದು ವೇಳೆ ಖಾಸಗಿ ಜಾಗವನ್ನ ಅತಿಕ್ರಮಿಸಿದರೆ ಅದೇ ಬಡಾವಣೆಯಲ್ಲಿ 50-50 ಅನುಪಾತದಲ್ಲಿ ಬಡಾವಣೆಯಲ್ಲಿ ಕೊಡಬೇಕು ಎಂಬ ನಿಯಮವಿದ್ದರೂ ವಿಜಯನಗರದಲ್ಲಿ ನೀಡಲಾಗಿದೆ.

14 ಬಿಡಿ ಸೈಟ್ ಗಳನ್ನ ನೀಡಲಾಗಿದೆ. ಪರಿಹಾರ ನೀಡಲು ಅಥವಾ ಬದಲಿ ಸೈಟ್ ಕೊಡಲು ಅವಕಾಶವಿಲ್ಲ. ಇದಕ್ಕೆ ಗೈಡ್ ಲೈನ್ಸ್ಇದೆ. ಕೆಟಿಪಿಸಿ ಆಕ್ಟ್ ನ್ನ ಉಲ್ಲಂಘಿಸಲಾಗಿದೆ. ಬಡಾವಣೆ ಸೈಟ್ ನಲ್ಲಿ 100 ಸೈಟ್ ಇದ್ದರೆ 75 ಸೈಟ್ ಗಳನ್ನ ಟೆಂಡರ್ ಕರೆದು ನೀಡಬೇಕು. ಪದ್ಮಭೂಷಣ ಪದಕ ವಿಜೇತ, ಯುದ್ಧದಲ್ಲಿ ಯೋಧ ಮಡಿದಾಗ ಕುಟುಂಬಕ್ಕೆ ಬಿಡಿ ಸೈಟ್ ನೀಡಬೇಕೆಂಬ ನಿಯಮವಿದೆ.

ಸಿಎಂ ಪತ್ನಿ ಅವರಿಗೆ 2017 ರಲ್ಲಿ ಸುಪ್ರೀಂ ಕೋರ್ಟ್ ನ ಆದೇಶಕ್ಕೆ ಮನ್ನಣೆ ನೀಡಿ ಸಚಿವ ಸಂಪುಟದ ಗೈಡ್ ಲೈನ್ಸ್ ಹಾಕಿದ್ದರು. ಈಗ ಮೂಡ ಹಂಚಿದ್ದು ಹೇಗೆ? ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಬಾಯಿಬಿಡಬೇಕು ಎಂದು ಆಗ್ರಹಿಸಿದರು. ಇಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮಗಳಿಗೆ ನೀಡಲು ಮುಂದಾಗದ ಸರ್ಕಾರ ಸಿಎಂ ಪತ್ನಿಗೆ ನೀಡಿರುವುದು ಪೂರ್ವ ನಿಯೋಜಿತ ತಂತ್ರ ಎಂದು ದೂರಿದರು.

ಮೂಡಾಕ್ಕೆ ಅಕ್ರಮವಾಗಿ ಹೊಂದಿಕೊಂಡಿರುವ ಲೇಔಟ್ ಗೆ ಅಕ್ರಮ ರಸ್ತೆ ಸಂಪರ್ಕವಿದೆ. ಇದಕ್ಕೆ ಮೂಡದಿಂದ ಹಣ ಪಡೆಯಲಾಗಿದೆ 4 ಸಾವಿರ ಕೋಟಿ ರೂ. ಮೌಲ್ವೀವೃದ್ಧಿ ಮಾಡಕಾಗಿದೆ ಎಂದು ಮೂಡ ಹಣ ನೀಡಿದೆ. ಪಕ್ಕದ ಲೇಔಟ್ ನಲ್ಲಿ ಪಾರ್ಕ್ ಅಭಿವೃದ್ಧಿ ಎಂದು ಹಣ ನೀಡಲಾಗಿದೆ. ಇದಕ್ಕೆ ಸಿದ್ದರಾಮಯ್ಯನವರ ಪ್ರಭಾವವೇ ಕಾರಣ ಎಂದರು.

ಬಡಾವಣೆಯಲ್ಲಿ ಬರುವ ಪಹಣಿದಾರೆನ್ನ ಹುಡುಕಿ ಸಚಿವ ಬೈರತಿ ಸುರೇಶ್ ನ 80% ರನ್ನ ಹುಡುಕಿ ಕಖೆದ 13 ತಿಂಗಳಲ್ಲಿ ಮೂಡಾದ ಅಂಧ ದರ್ಬಾರ್ ನಲ್ಲಿ ನೀಡಲಾಗುತ್ತಿದೆ ಎಂದರು. 2023 ರಲ್ಲಿ ಮೂರು ಜನರ ತನಿಖಾ ತಂಡ ರಚಿಸಲಾಗಿತ್ತು. 50-50 ಅನುಪಾತದಲ್ಲಿ ಹಂಚಿದ ನಿವೇಶನಗಳಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ವರದಿ ನೀಡಿತ್ತು. ಇದನ್ನ ಕಸದ ಬುಟ್ಟಿಗೆ ಹಾಕಿ ಸಿಎಂನ್ನ ಮೆಚ್ಚಿಸುವ ಪ್ರಯತ್ನ ನಡದಿದೆ ಎಂದು ದೂರಿದರು.

ಸಿದ್ದರಾಮಯ್ಯನವರು ಈ ಹಗರಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸಿದ ಅವರು, 2020 ರಲ್ಲಿದ್ದ ಬಿಜೆಪಿ ಸರ್ಕಾರದ ಗಮನಕ್ಕೆ ತಾರದೆ ಈ ಅವ್ಯವಹಾರ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ