ಗುರುವಾರ, ಜುಲೈ 11, 2024

ಆರ್ ಎಂ ಎಂ ಅಧ್ಯಕ್ಷರಾಗಿ, ಎಸ್ ಕೆ ಮರಿಯಪ್ಪ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಬಹತೇಕ ಖಚಿತ

ಸುದ್ದಿಲೈವ್/ಶಿವಮೊಗ್ಗ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಎಂದಿನಂತೆ ನಿರೀಕ್ಷೆಯಲ್ಲಿದ್ದ ಆರ್ ಎಂ ಮಂಜುನಾಥ್ ಗೌಡ ಅಧ್ಯಕ್ಷರಾಗಿ ಆಯ್ಕೆಯಾದರೆ ಕುತೂಹಲ ಮೂಡಿಸಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಎಸ್ ಕೆ ಮರಿಯಪ್ಪ ಆಯ್ಕೆಯಾಗಲಿದ್ದು ಅಧಿಕೃತ ಘೋಷಣೆವೊಂದೇ ಬಾಕಿ ಇದೆ.

ಡಿಸಿಸಿ ಬ್ಯಾಂಕ್ ಗೆ ಎರಡು ವಾರದ ಹಿಂದೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಶಾಸಕ ಗೋಪಾಲ್ ಕೃಷ್ಣ ಬೇಳೂರು, ಎಂಎಂ ಪರಮೇಶ್ವರ್, ಬಸವರಾಜ್ ಪಿಎಲ್, ಜಿ.ಎನ್ ಸುಧೀರ್, ಎಸ್ ಕೆ ಮರಿಯಪ್ಪ, ಟಿ.ಶಿವಶಂಕರಪ್ಪ, ಚಂದ್ರಶೇಖರ್ ಗೌಡ, ಕೆಪಿ ರುದ್ರಗೌಡ, ಆರ್ ಎಂ ಮಂಜುನಾಥ್ ಗೌಡ, ಬಸವಾನಿ ವಿಜಯದೇವ್, ಕೆ.ಪಿ ದುಗ್ಗಪ್ಪ ಗೌಡ,  ಸಿ.ಹನುಮಂತಪ್ಪ ಗೆಲವು ಸಾಧಿಸಿದ್ದಾರೆ.

ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ನಿರೀಕ್ಷೆಯಂತೆ ಆರ್ ಎಂ ಮಂಜುನಾಥ್ ಗೌಡ ಡಿಸಿಸಿ ಬ್ಯಾಂಕ್ ನ 11 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ ಎಸ್ ಕೆ ಮರಿಯಪ್ಪ ಮೊದಲಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬೋರ್ಡ್ ಮೀಟಿಂಗ್ ನಡೆಯುತ್ತಿದ್ದು ಬೋರ್ಡ್ ಮೀಟಿಂಗ್ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕೃತ ಘೋಷಣೆ ಆಗಲಿದೆ.

ಇದನ್ನೂ ಓದಿ-https://suddilive.in/archives/18988

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ