ಬುಧವಾರ, ಜುಲೈ 24, 2024

ಡಾ.ವಿಲಿಯಂ ವಿನ್ನಿಪ್ರೆಡ್ ವಿರುದ್ಧ ಕ್ರಮ ಕೈಗೊಳ್ಳಿ-ಭಕ್ತ ವೃಂದ ಆಗ್ರಹ

 ಸುದ್ದಿಲೈವ್/ಶಿವಮೊಗ್ಗ

ಕಥೋಲಿಕ್ ಕ್ರೈಸ್ತ ಧರ್ಮದಕ್ಕೆ ಪೋಪ್ ಒಬ್ವರೇ ಅತ್ಯುನ್ನತ ಶ್ರೇಣಿಯಲ್ಲಿರುತ್ತಾರೆ.  ಅವರ ಕೆಳಗೆ ಬಿಷಪ್ ಮತ್ತು  ನುನ್ಷಿಯೋ ಬರ್ತಾರೆ.  ಇವರು ದೇಶಕ್ಕೆ ಒಬ್ಬರೇ ಇರ್ತಾರೆ.  ದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಮೂರು ಕ್ಷೇತ್ರಕ್ಕೆ ಒಬ್ಬ ಧರ್ಮಗುರು ಬರ್ತಾರೆ ಇವರ ಕೆಳಗೆ 60 ಜನ ಧರ್ಮಗುರುಗಳು ಬರುತ್ತಾರೆ.

ಗುರು ಆದವನಿಗೆ ಆಸ್ತಿ ಇರಬಾರದು, ದೇಣಿಗೆ ಬಂದರೆ ಅದನ್ನ ಚರ್ಚ್ ನ ಫೈನಾನ್ಸ್ ಸಮಿತಿಗೆ ಹೋಗಬೇಕು. ಗುರುವನ್ನ(ಫಾದರ್) ಬಿಷಪ್ ನೋಡಿಕೊಳ್ತಾರೆ. ಫಾದರ್ ಗೆ ಸಂಬಳ 10 ಸಾವಿರ ರೂ. ಇರುತ್ತಾರೆ. ಕೆನಾನ್ ಲಾ ಕಥೋಲಿಕ್ ಕ್ರೈಸ್ತರು ಪಾಲಿಸುತ್ತಾರೆ.

ತೀರ್ಥಹಳ್ಳಿಯ ಮಾಜಿ ಫಾದರ್ ವಿಲ್ಲಿಯಂ ವಿನ್ನಿಫ್ರೆಡ್ ಅವರು ಹಲವು ಚರ್ಚ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಭದ್ರಾವತಿಯಲ್ಲಿ ಇದ್ದಾಗ ಭಕ್ತರು 60 ಲಕ್ಷ ರೂ ಲೆಕ್ಕ ಕೊಡಲು ಬಿಷಪ್ ಗೆ ಕೇಳಿದ್ದಾರೆ. ಆದರೆ ಯಾವ ಬಗ್ಗೆನೂ ಫಾದರ್ ವಿನ್ನಿಫ್ರೈಡ್ ಮಾಹಿತಿ ಕೊಡಲಿಲ್ಲ. ಸಾಗರದಲ್ಲಿ ಆಸ್ತಿ  ಮಾಡಿಕೊಂಡಿರುವ ಬಗ್ಗೆ ಮಾಹಿತಿ ಕೊಡಲಿಲ್ಲ.

35 ವರ್ಷದಿಂದ ಏನು ಕ್ರಮ ಆಗಿಲ್ಲ. ತೀರ್ಥಹಳ್ಳಿಯಲ್ಲಿರುವಾಗ ಫಾದರ್ ವಿನ್ನೀಪ್ರೈಡ್ ಬಾಡಿಗೆ ಮನೆಯಲ್ಲಿಇದ್ದಾರೆ. ಇದು ಕ್ರೈಸ್ತ ಧರ್ಮದ ವಿರುದ್ಧವಾಗಿದೆ. ಬಿಷಪ್ ನವರು ಬಂದು ಮಾಹಿತಿ ಸ್ಪಷ್ಟೀಕರಣಕ್ಕೆ ಸೂಚಿಸಿದರೂ ವಿನ್ನಿಪ್ರೈಡ್ ಬಿಷಪ್ ನವರ ಮಾತನ್ನೇ ಉಲ್ಲಂಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿನ್ನಿಫ್ರೈಡ್ ಅವರು ಬಿಷಪ್ ಹೆಸರು ಹೇಳಿಕೊಂಡು ಯೂಟ್ಯೂಬ್ ನಲ್ಲಿ ಹರಿಬಿಟ್ಟಿರುವುದು ರಾಜ್ಯಾದ್ಯಂತ ಗುಲ್ಲೆಬ್ಬಿದೆ. ಹಾಗಾಗಿ ತಾವೇ ತಪ್ಪಿತಸ್ಥ ಸ್ಥಾನದಲ್ಲಿದ್ದು ಬಿಷಪ್ ಬಗ್ಗೆ ಮಾತನಾಡಿರುವ ಇವರ ವಿರುದ್ಧ ಕ್ರಮಕೈಗೊಳ್ಳಬೇಕು  ಎಂದು ನ್ಯಾಷನಲ್ ಕೌನ್ಸಿಲ್ ಆಫ್ ದಲಿತ ಕ್ರಿಶ್ಚಿಯನ್ ನ ಕನ್ವಿನಿಯರ್ ಡಾ.ಇಸಬೆಲ್ಲಾ ಕ್ಸೇವಿಯರ್ ಸುದ್ದಿಗೋಷ್ಠಿಯಲ್ಲಿ ಅಗ್ರಹಿಸಿದರು


.

ಡಾ.ಪಿ.ಮೂರ್ತಿ ಮಾತನಾಡಿ, ಎಸ್ಪಿ ಅವರಿಗೆ ಮನವಿ ನೀಡಲಾಗುತ್ತಿದೆ. ತನಿಖಾತಂಡ ರಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ. ವಿನ್ನಿಫ್ರೈಡ್ ಅವರು ಇಲ್ಲಿಗೆ ನಿಲ್ಲಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಪರಿವರ್ತನಾ ಆಂದೋಲನ ವೈ ಮರಿಸ್ವಾಮಿ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರಗಯದರ್ಶಿ ಭಾನುಪ್ರಸಾದ್, ಅಂಬೇಡ್ಕರ್ ಸೇನೆಯ ಮಂಜುನಾಥ್,  ವೆಂಕಟೇಶ್, ಕದಂಬ ಕನ್ನಡ  ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು. 

ಇದನ್ನೂ ಓದಿ-https://www.suddilive.in/2024/07/blog-post_675.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ