ಬುಧವಾರ, ಜುಲೈ 24, 2024

ಇಫಿಮಿಗಿ ಫೌಂಡೇಷನ್ ನಿಂದ ನಿರುದ್ಯೂಗ ಯುವಕರಿಗೆ ಭರ್ಜರಿ ನ್ಯೂಸ್

 

ಇಫಿಮಿಗಿ ಸಂಸ್ಥೆಯ ಮರಿಗಿರಿ ರೆಡ್ಡಿ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ


ಇಫಿಮಿಗಿ ಫೌಂಡೇಷನ್ ನಿಂದ ಹೊಸ ಯೋಜನೆಯೊಂದು ಹೊರಗೆ ಬರುತ್ತಿದೆ. ಹೊಸ ಉದ್ಯೋಗವನ್ನ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯುವಕರಿಗೆ ಉದ್ಯೋಗ ನೀಡುತ್ತಿದೆ. ಆರೋಗ್ಯ, ಶಿಕ್ಷಣ, ಮಾಧ್ಯಮ ಸೇರಿದಂತೆ 36 ಕ್ಷೇತ್ರದಲ್ಲಿ ಉಚಿತ ಸೇವೆ ನೀಡಲು ಫೌಂಡೇಷನ್ ಮುಂದಾಗಿದೆ. 


ಪೌಂಡೇಷನ್ ನ ಸಿಇಒ ಅವರು ಇಂದು ಸುದ್ದಿಗೋಷ್ಠಿ ನಡೆಸಿದ ಮರಿಗಿರಿರೆಡ್ಡಿ,  ಹೊಸ ಪ್ರಾಜೆಕ್ಟ್ ಲಾಂಚ್ ಮಾಡುತ್ತಿದ್ದೇವೆ, 36 ಕ್ಷೇತ್ರಗಳಲ್ಲಿ ಪೌಙಡೇಷನ್ ಲಗ್ಗೆ ಇಡುತ್ತಿದೆ.  ಆಸ್ಪತ್ರೆ, ವಿದ್ಯಾಭ್ಯಾಸಕ್ಕೆ ಹೊಸ ಸಾಫ್ಟ್ ವೇರ್ ತರಲಾಗುತ್ತಿದೆ. ನಮ್ಮ‌ಪೌಂಡೇಷನ್ ನ್ನ ಆ್ ಬಳಕೆ ಮಾಡಿದರೆ ಮನೆಗಳಿಗೆ ವೈದ್ಯರು ಬಂದು ಉಚಿತ ಸೇವೆ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು. 


ಮೂರು ಸ್ಯಾಟ್ ಲೈಟ, ಮೂರು ಡೈಲಿ ಪೇಪರ್ ಯೂಟ್ಯೂಬ್ ಚಾನೆಲ್ ಗಳನ್ನ ಸಹ ಮಾಧ್ಯಮ ಕ್ಷೇತ್ರದಲ್ಲಿ ಆರಂಭಿಸಲಾಗುತ್ತಿದೆ.  36 ಕ್ಷೇತ್ರದಲ್ಲಿ ಫ್ರೀ ಲಾಂಚ್ ಆಗುತ್ತಿದೆ  ಸೆ.06 ಕ್ಕೆ ರಂದು ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ. ನವೆಂಬರ್ ನಲ್ಲಿ ಶಿವಮೊಗ್ಗ ಜಿಲ್ಲೆಗಳಿಗೆ ಆರಂಭವಾಗುತ್ತಿದೆ. ನ.23 ರಿಂದ ಬ್ರಹ್ಮೋತ್ಸವದಿಂದ ಆರಂಬವಾಗುತ್ತಿದೆ. 


99 ರಾಷ್ಟ್ರಗಳಲ್ಲಿ ಈ ಸೇವಾ ಕ್ಷೇತ್ರವನ್ನ ಆರಂಭಿಸಕಾಗುತ್ತಿದೆ. ಹಲವು ಕ್ಷೇತ್ರಗಳು ಸೇವಾ ಮನೋಭಾವನೆಯಿಂದ ದೂರವಿದೆ. ಅದಕ್ಕೆ ಸೇವಾ ಮನೋಭಾವವನ್ನ ತರುವ ಪ್ರಯತ್ನ ನಮ್ಮ ಫೌಂಡೇಷನ್ ನ ಗುರಿಯಾಗಿದೆ ಎಂದರು. ಹೆಸರು ಮಾಡಲು ಮಾತ್ರ ಈ ಕ್ಷೇತ್ರಕ್ಕೆ ಇಳಿದಿದ್ದೇವೆ. ನ್ಯೂ ಸ್ಟಾರ್ಟ್ ಅಫ್ ಕಂಪನಿಯಾಗಿದೆ. 


2024-25 ನೇ ಸಾಲಿನಲ್ಲಿ 9000 ಕೋಟಿ ವೆಚ್ಚವಾಗಲಿದೆ. ಮೊದಲಿಗೆ 100 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುತ್ತಿದೆ. ಸೇವಾ ಕ್ಷೇತ್ರವನ್ನ ಆರಂಭಿಸಲಾಗುತ್ತಿದೆ. ಟ್ರಸ್ಟ್ ಹೆಸರಿನಲ್ಲಿ ಸೇವಾ ವ್ಯವಹಾರ ಆರಂಭಿಸುತ್ತಿದ್ದೇವೆ. ಸೇವೆ ಮಾಡುವ ಉದ್ದೇಶದಿಂದ ಕ್ಷೇತ್ರಕ್ಕೆ ಕಾಲಿಡುತ್ತಿದ್ದೇವೆ. ವ್ಯವಹಾರ ಮಾಡಲು ಅಲ್ಲ ಎಂದರು. 


ಒಳ್ಳೂರು ಕಂಪನಿ ಆರಂಭವಾಗುತ್ತಿದೆ. ಶಿವಮೊಗ್ಗದಲ್ಲಿ 9000 ಜನರನ್ನ ಉದ್ಯೋಗಕ್ಕೆ ಯುವಕರನ್ನ ತೆಗೆದುಕೊಳ್ಳುತ್ತಿದ್ದೇವೆ.‌ ಸಂಬಳವಿರುತ್ತದೆ. ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿದೆ ಎಂದರು.  ಸುದ್ದಿಗೋಷ್ಠಿಯಲ್ಲಿ ಸವಿತಾ, ಚಂದನಾ, ಸುಮಿತ್ರರಿರುತ್ತಾರೆ.


ಇದನ್ನೂ ಓದಿ-https://www.suddilive.in/2024/07/blog-post_467.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ