ಶುಕ್ರವಾರ, ಜುಲೈ 5, 2024

ಜೈದಾನ್ ಕೊಲೆ ಆರೋಪಿತರಿಗೆ ಮತ್ತೊಂದಿಷ್ಟು ಶಿಕ್ಷೆ

ಸುದ್ದಿಲೈವ್/ಶಿವಮೊಗ್ಗ

ವಾದಿ ಎ‌ ಹುದಾ ಬಡಾವಣೆಯಲ್ಲಿ ಮೊಹ್ಮದ್ ಜೈದಾನ್ ನನ್ನ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗಳಿಗೆ ಒಳಗಾದದವರಿಗೆ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ.

ಜೈದಾನ್ ಕೊಲೆ ಮಾಡಿದ್ದ ಮೊಹಮ್ಮದ್ ನಾಖೇಶ್ ಶಾ ಅಲಿ ಯಾನೆ ನಖೈ ಮತ್ತು ಅಬು ಸಲೇಹ್ ಗೆ ಹಾಫ್ ಮರ್ಡರ್ ಕೇಸ್ ನಲ್ಲಿ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಕಠಿಣ ಶಿಕ್ಷೆ ಮತ್ತು ತಲಾ 15 ವರ್ಷ ಶಿಕ್ಷೆ ಪ್ರಕಟವಾಗಿದೆ.‌

ಶಿವಮೊಗ್ಗ ಟೌನ್ ಲಕ್ಷರ್ ಮೊಹಲ್ಲಾದ ವಾಸಿಗಳಾದ ಮೊಹಮ್ಮದ್ ನಾಖೇಶ ಅಲಿ ಮತ್ತು ಅಬು ಸಲೇಹ್ ರವರುಗಳು ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಲಷ್ಕರ್ ಮೊಹಲ್ಲಾದ ನಿವಾಸಿ  ಮೊಹಮ್ಮದ್ ಯೂಸೂಫ್(50)ರನ್ನ  ಅಲ್ ಹಿಲಾಲ್ ಶಾಲೆಯ ಹತ್ತಿರ  ಅವಾಚ್ಯ ಶಬ್ದಗಳಿಂದ ಬೈದು, ಚಾಕುವಿನಿಂದ ಬಲ ದವಡೆಗೆ ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.‌

ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಶಿವಪ್ರಸಾದ್, ಪಿಎಸ್ಐ, ಕೋಟೆ ಪೊಲೀಸ್ ಠಾಣೆ ಮತ್ತು  ಶಿವಾನಂದ್ ಕೆ, ಪಿಎಸ್ಐ, ಕೋಟೆ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.‌

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದರು, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ  ಮಂಜುನಾಥ್ ನಾಯಕ್ ರವರು ಇಂದು ಶಿಕ್ಷೆ ಪ್ರಕಟಿಸಿದ್ದಾರೆ.‌

ಆರೋಪಿತರಾದ 1) ಮೊಹಮ್ಮದ್ ನಾಖೇಶ್ ಶಾ ಅಲಿ @ ನಖೈ, 19 ವರ್ಷ, ಲಕ್ಷರ್ ಮೊಹಲ್ಲಾ, ಶಿವಮೊಗ್ಗ ಮತ್ತು 2) ಅಬು ಸಲೇಹ್, 20 ವರ್ಷ, ಲಕ್ಷರ್ ಮೊಹಲ್ಲಾ, ಶಿವಮೊಗ್ಗ ಇವರುಗಳಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 15,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 06 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ-https://suddilive.in/archives/18591

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ