ಸುದ್ದಿಲೈವ್/ಭದ್ರಾವತಿ
ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಿಂದಾಗಿ ಜಲಾಶಯಗಳು ತುಂಬಿ ತುಳುಕುತ್ತಿದ್ದು ಭದ್ರ ಜಲಾಶಯಕ್ಕೆ 38 ಸಾವಿರ ಕ್ಯೂಸೆಕ್ ಹರಿದು ಬರುತ್ತಿದೆ.
ಜಲಾಶಯದಿಂದ ನದಿಗೆ 30 ಸಾವಿರ ಹರಿಸಲಾಗುತ್ತಿದ್ದು ಭದ್ರಾವತಿಯಲ್ಲಿ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದ ಹಿಂಭಾಗದ ಮುಳುಗು ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ.
ಜಲಾಶಯದ ಗೇಟನ್ನ ಇಂದು ಬೆಳಿಗ್ಗೆ ಒಪನ್ ಮಾಡಿ ನದಿಗೆ ನೀರು ಹರಿಸಲಾಗುತ್ತಿತ್ತು. ಸಂಜೆಯ ವೇಳೆಗೆ ಹರಿದು ಬಂದ ಒಳಹರಿವಿನಿಂದ ಹೆಚ್ಚಿನನೀರು ಬಿಡಲಾಗುತ್ತಿದೆ. ಇದರಿಂದ ಭದ್ರಾವತಿಯ ಹೊಸ ಸೇತುವೆ ಮತ್ತು ಕವಲಗುಂದಿ ಗ್ರಾಮ ಮುಳುಗುವ ಅಪಾಯದ ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ-https://www.suddilive.in/2024/07/80-01.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ