ಸುದ್ದಿಲೈವ್/ಶಿವಮೊಗ್ಗ
ಮಲೆನಾಡಿನಮಳೆಯ ಆರ್ಭಟ ಮುಂದುವರೆದುದೆ ಪರಿಣಾಮ ನಾಳೆ ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕಿನ ಶಾಲಾ, ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಎರಡು ಮೂರು ದಿನಗಳಿಂದ ಬಿಡುವು ನಿಡಿದ್ದ ಮಳೆರಾಯ ಮಲೆನಾಡಿನಲ್ಲಿ ಮತ್ತೆ ಆರ್ಭಟಿಸಿದ್ದಾನೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಮಳೆ ಹೆಚ್ಚಾಗಿದೆ. ಪರಿಣಾಮ ಸಾಗರ ಮತ್ತು ಹೊಸನಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ಹಾಗೂ ಅಂಗನವಾಡಿಗೆ ಆಯಾ ತಾಲೂಕಿನ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ. ಸಾಗರದಲ್ಲಿ ಮಳೆ ಹೆಚ್ಚಿದೆ. ಅಧಿಕೃತ ರಜೆಯ ಘೋಷಣೆ ಹೊರ ಬೀಳಬೇಕಿದೆ.
ಇದನ್ನೂ ಓದಿ-https://www.suddilive.in/2024/07/blog-post_514.html
Tags:
ಶೈಕ್ಷಣಿಕ ಸುದ್ದಿಗಳು