ಸುದ್ದಿಲೈವ್/ಶಿವಮೊಗ್ಗ
ಕಳೆದ ವಾರ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗಳು ಉರುಳುವುದು ನಿಂತಿಲ್ಲ. ಶಿವಮೊಗ್ಗದಲ್ಲಿ ಮಳೆ ಬಿಡುವು ನೀಡಿದೆ. ಆದರೆ ಗ್ರಾಮಾಂತರ ಭಾಗದಲ್ಲಿ ಮಳೆಗಳಾಗುತ್ತಿವೆ. ಇದರಿಂದಾಗಿ ಮಳೆಯ ಅವಾಂತರಗಳು ಮುಂದು ವರೆದಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಾಡರವಳ್ಳಿ ಗ್ರಾಮದಲ್ಲಿ ಮಳೆಗೆ ಹೆಂಚಿನ ಮನೆ ಕುಸಿದು ಬಿದ್ದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಮನೆಯಲ್ಲಿದ್ದ ಭಾರತಿ (45) ಎಂಬ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಕ್ಕಪಕ್ಕದ ಮನೆಯವರಿಂದ ಮಹಿಳೆಯ ರಕ್ಷಣೆಯಾಗಿದೆ. ಗಾಯಗೊಂಡ ಮಹಿಳೆ ಶಿಕಾರಿಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗಡಿ ಗೋಡೆ ಬಿದ್ದು ವಾಹನ ಜಖಂ
ಹೊಸನಗರ ತಾಲೂಕಿನಲ್ಲಿ ಮಳೆ ಮುಂದುವರೆದಿದೆ. ಮಳೆಗೆ ಅಂಗಡಿಯ ಗೋಡೆ ಉರುಳಿದೆ. ಮಳಿಗೆ ಗೋಡೆ ಉರುಳಿ ಅಂಗಡಿ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದೆ. ರಾಮಚಂದ್ರಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಾಮಚಂದ್ರಪುರ ಗ್ರಾಮದ ಗೋವಿಂದಪ್ಪ ಎಂಬುವರಿಗೆ ಅಂಗಡಿಯಾಗಿದ್ದು ಹಾನಿಗೊಳಗಾದ ಕಾರಿನ ಮಾಲೀಕರು ಅವರೇ ಆಗಿದ್ದಾರೆ.
https://www.suddilive.in/2024/07/blog-post_145.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ