ಶನಿವಾರ, ಜುಲೈ 27, 2024

ಒಂದು ಹೋಟೆಲ್ ಎರಡು ಗೋ ಕಸಾಯಿ ಖಾನೆ ಮೇಲೆ ದಾಳಿ



ಸುದ್ದಿಲೈವ್/ಭದ್ರಾವತಿ


ನಿನ್ನೆ ಒಂದೇ ದಿನ ಭದ್ರಾವತಿಯಲ್ಲಿ ಮೂರು ಗೋಮಾಂಸ ಮಾರಾಟದ ಅಡ್ಡೆಯ ಮೇಲೆ ಪೊಲೀಸ್ ದಾಳಿಯಾಗಿದೆ. ಒಂದು ಹೋಟೆಲ್ ಮತ್ತು ಎರಡು ಖಸಾಯಿಖಾನೆ ವ್ಯಾ್ತಿಯಲ್ಲಿ ದಾಳಿ ನೇದಿದೆ. 


ಭದ್ರಾವತಿ ಪೇಪರ್ ಟೋನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೊಮ್ಮನಕಟ್ಟೆಯ ಫಾರಂ ಎಂಬತನ ಮನೆಯ ಅಂಡರ್ ಗ್ರೌಂಡ್ ನಲ್ಲಿ ಗೋವಿನ ಕಸಾಯಿ ಖಾನೆಯ ದಾಳಿ ಆಗಿದೆ.


ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ವರ್ ಕಾಲೋನಿಯ ಭದ್ರುದ್ದೀನ್ ಗೆ ಸಂಬಂಧಪಟ್ಟ ಗೋವಿನಕಸಾಯಿ ಕಾನೆ ದಾಳಿಯಾಗಿದೆ.


ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿಂಗ್ ಹೋಟೆಲ್ನಲ್ಲಿ ಗೋವಿನ ಮಾಂಸ ಮಾರುತಿದ್ದರಿಂದ ದಾಳಿಯಾಗಿದೆ ಒಂದು ತಿಂಗಳು ಮುಂಚೆ ಸಹ ಕಿಂಗ್ ಹೋಟೆಲ್ನ ಮೇಲೆ ಗೋಮಾಂಸದ ವ್ಯಾಪಾರದ ವಿಚಾರವಾಗಿ ದಾಳಿಯಾಗಿತ್ತು.


ಪದೇ ಪದೇ ಹೋಟೆಲ್ ಮೇಲೆ ದಾಳಿ


ಒಂದೇ ತಿಂಗಳಲ್ಲಿ  ಕಿಂಗ್ ಹೋಟೆಲ್ ಮೇಲೆ ದಾಳಿ ನಡೆದಿರುವುದು ಅಚ್ಚರಿ ಮೂಡಿಸಿದೆ ಎಂದು ಹಿಂದೂ ಸಂಘಟನೆ ಆರೋಪಿಸಿದೆ. ಗೋಹತ್ಯೆ ನಿಷೇಧದ ಕಾಯ್ದೆ ಅಡಿ ದಾಳಿ ಆಗುತ್ತಿದೆಯೇ ಇಲ್ಲವೆಂಬುದೇ ಅನುಮಾನ ಎಂದು ದೂರಿದೆ.‌

ಇದನ್ನೂ ಓದಿ-https://www.suddilive.in/2024/07/blog-post_888.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ