ಸುದ್ದಿಲೈವ್/ಶಿವಮೊಗ್ಗ
ತುಂಗಾ ಜಲಾಶಯದ ಬಳಿ ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದೆ. ಗಾಜನೂರಿನ ತುಂಗಾ ಜಲಾಶಯದಲ್ಲಿ ನಿನ್ನೆ ಸಂಜೆ ನಡೆದಿದೆ.
ತುಂಗಾ ಜಲಾಶಯ ವೀಕ್ಷಣೆಗೆ ನಿನ್ನೆ ಪ್ರೇಮಿಗಳು ತೆರಳಿದ್ದರು. ಪ್ರೇಮಿಗಳ ಜೊತೆ ಪ್ರಿಯತಮನ ಸ್ನೇಹಿತನೂ ತೆರಳಿದ್ದನು. ಯುವತಿಯ ಜೊತೆ ಪ್ರೇಮಿ ಹಾಗು ಆತನ ಸ್ನೇಹಿತನಿಂದ ಅನುಚಿತ ವರ್ತನೆಯ ಆರೋಪ ಮಾಡಲಾಗಿದೆ.
ಸ್ಥಳೀಯ ಯುವಕರಿಂದ ಅನುಚಿತ ವರ್ತನೆ ಆರೋಪ ಕೇಳಿ ಬಂದಿದೆ. ನಾಲ್ವರು ಸ್ಥಳೀಯ ಯುವಕರಿಂದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಂತರ ಪ್ರೇಮಿ ಮತ್ತು ಆತನ ಸ್ನೇಹಿತ ಓಡಿ ಹೋಗಿದ್ದಾನೆ. ಯುವತಿಯನ್ನು ಸ್ಥಳದಲ್ಲೇ ಇರಿಸಿಕೊಂಡಿರುವ ದೂರು ಕೇಳಿ ಬಂದಿದೆ.
ಯುವತಿ ಕಿಡ್ನಾಪ್ ಬಗ್ಗೆ ಪ್ರೇಮಿಯ ಸ್ನೇಹಿತನಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ಮೇರೆಗೆ ಸ್ಥಳಕ್ಕೆ ತೆರಳಿದ್ದ ತುಂಗಾನಗರ ಠಾಣೆ ಪೊಲೀಸರು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ್ದಾರೆ. ಯುವತಿ ಹಾಗು ಸ್ಥಳೀಯರನ್ನ ಇಬ್ವರು ಯುವಕರನ್ನು ಠಾಣೆಗೆ ಪೊಲೀಸರು ಕರೆತಂದಿದ್ದಾರೆ.
ತುಂಗಾನಗರ ಠಾಣೆಯಲ್ಲಿ ಯುವತಿ ಹಾಗು ಯುವಕರ ವಿಚಾರಣೆ ನಡೆದಿದೆ. ಸುರಭಿ ಕೇಂದ್ರದ ಅಧಿಕಾರಿ, ಮಹಿಳಾ ಐಪಿಎಸ್ ಹಾಗೂ ಅಡಿಷನಲ್ ಎಸ್ಪಿ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಯುವತಿಯ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ-https://suddilive.in/archives/18366