ಶನಿವಾರ, ಜುಲೈ 27, 2024

ಲಿಂಗನಮಕ್ಕಿ ಜಲಾಶಯದಿಂದ ಎರಡನೇ ಅಲರ್ಟ್-ತುಂಗ-ಭದ್ರದ ಪರಿಸ್ಥಿತಿ ಏನಾಗಿದೆ?

 


ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನ ಮಳೆಯ ರಭಸಕ್ಕೆ ಜಲಾಶಯಗಳಲ್ಲಿನ ಒಳಹರಿವು ಹೆಚ್ಚಾಗಿದೆ. ತುಂಗ,ಭದ್ರ, ಲಿಂಗನಮಕ್ಕಿ ಜಲಾಶಯಗಳಲ್ಲಿ ಭಾರಿಪ್ರಮಾಣದ ಒಳಹರಿವಿದೆ.


ತುಂಗ ನದಿಗೆ ನಿನ್ನೆ 58 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 21 ಗೇಟನ್ನ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಶೃಂಗೇರಿ, ಕಿಗ್ಗಾ, ಕೊಪ್ಪ, ತೀರ್ಥಹಳ್ಳಿಯಲ್ಲಿ ವ್ಯಾಪಕ ಮಳೆಯಿಂದಾಗಿ ತುಂಗೆಯ ಒಳಹರಿವು ಹೆಚ್ಚಾಗಿದೆ. .


ಭದ್ರ ನದಿಗೆ ನಿನ್ನೆ 35 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿತ್ತು. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ನಿನ್ನೆ 174.3 ಅಡಿ ನೀರು ಸಂಗ್ರಹವಾಗಿತ್ತು. ಇಂದು 49 ಸಾವಿರ ಕ್ಯೂಸೆಕ್  ನೀರು ಹರಿದು ಬರುತ್ತಿದ್ದು, ಇಂದು 178 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 156l ಅಡಿ ಆಜುಬಾಜಿವಿನಲ್ಲಿ ನೀರು ಸಂಗ್ರಹವಾಗಿತ್ತು.


ಲಿಂಗನಮಕ್ಕಿ ಜಲಾಶಯದ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವತ್ತು 65,147 ಕ್ಯೂಸೆಕ್‌ ಒಳ ಹರಿವು ಇದೆ. ನಿನ್ನೆ ನೀರಿನ ಮಟ್ಟ 1804.80 ಅಡಿಗೆ ತಲುಪಿದೆ. ಇಂದು  ಜಲಾಶಯಕ್ಕೆ74514 ಕ್ಯೂಸೆಕ್ ನೀರು ಒಳಗಹರಿವಿದ್ದು 1807 ಅಡಿಗೆ ಏರಿಮೆಯಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ಎರಡನೇ ಎರಡನೇ ಅಲರ್ಟ್ ಹೊರಬಿದ್ದಿದೆ. 1819 ಅಡಿ ಸಾಮರ್ಥ್ಯದ ಜಲಾಶಯ ಇದಾಗಿದ್ದು ಇನ್ನುಮುಂದೆ ಜಲಾಶಯ ತುಂಬುವುದೇ ಕುತೂಹಲವಾಗಿದೆ.

ಇದನ್ನೂ ಓದಿ-https://www.suddilive.in/2024/07/blog-post_534.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ