ಸುದ್ದಿಲೈವ್/ರಿಪ್ಪನ್ ಪೇಟೆ
ಪಟ್ಟಣದ ಪದವಿ ಪೂರ್ವ ಕಾಲೇಜಿನ ಹಿಂಭಾಗ ಕೆರೆಹಳ್ಳಿ ರಸ್ತೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕೊಟ್ಟಿಗೆ ಮುರಿದು ಬಿದ್ದು ಎಮ್ಮೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೆರೆ ಹಳ್ಳಿಯ ಶಿವಾಜಿ ರಾವ್ ರವರ ಮನೆಯಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಈ ಘಟನೆ ಸಂಭವಿಸಿದೆ.ಮೂಕ ಪ್ರಾಣಿಗಳ ಆಕ್ರಂದನಕ್ಕೆ ಹೊರಗೆ ಬಂದ ಮನೆಯವರಿಗೆ ಆಘಾತ ಕಾದಿತ್ತು. ಕೊಟ್ಟಿಗೆ ಅಡಿಯಲ್ಲಿ ಎಂಟು ಎಮ್ಮೆಗಳು ಸಿಕ್ಕಿಹಾಕಿಕೊಂಡಿದ್ದು ಅಕ್ಕ ಪಕ್ಕದವರ ಸಹಾಯದಿಂದ ಏಳು ಎಮ್ಮೆಗಳನ್ನು ರಕ್ಷಿಸಿದರು ಒಂದು ಎಮ್ಮೆ ಸ್ಥಳದಲ್ಲೇ ಸಾವನಪ್ಪಿತ್ತು.
ಉಳಿದ ಎಮ್ಮೆಗಳಲ್ಲಿ ಎರಡು ಎಮ್ಮೆಗಳಿಗೆ ಗಂಭೀರ ಪ್ರಮಾಣದ ಹೊಡೆತ ಬಿದ್ದಿದ್ದು ಉಳಿದ ಜಾನುವಾರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ