ಮಳೆಗೆ ಉರುಳಿ ಬಿದ್ದ ಮನೆಗಳು |
ಸುದ್ದಿಲೈವ್/ಶಿವಮೊಗ್ಗ/ಸೊರಬ
ಜೂನ್ ತಿಂಗಳ ಮಳೆಗೆ ಮಲೆನಾಡು ತತ್ತರಿಸಿದೆ. ಕಣ್ಣ ಹಾಯಿಸಿದಷ್ಟು ನೀರೋ ನೀರು. ಮಳೆ ಮತ್ತು ಥಂಡಿ ಗಾಳಿ ಮಣ್ಣಿನ ಗೋಡೆಗಳನ್ನ ಶಿಥಿಲಗೊಳಿಸುತ್ತಿವೆ. ಪರಿಣಾಮ ರಾತ್ರೋ ರಾತ್ರಿ ಮನೆ ಗೋಡೆಗಳು ಕುಸಿದು ಬೀಳುತ್ತಿವೆ.
ನಿನ್ನೆಯ ಒಂದೇ ದಿನಕ್ಕೆ ಶಿವಮೊಗ್ಗ ತಾಲೂಕಿನಲ್ಲಿ 25 ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಕೆಲ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಅದೃಷ್ಠವಶಾತ್ ಜನಗಳು ಇಲ್ಲದ ವೇಳೆ ಬಿದ್ದ ಪರಿಣಾಮ ಯಾವುದೇ ಪ್ರಾಣಿ ಹಾನಿಸಂಭವಿಸಿಲ್ಲ.
ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಕಂಡು ಬರುತ್ತಿಲ್ಲ ಆದರೆ ಮಳೆಗೆ ಥಂಡಿ ಹಿಡಿದಿದೆ. ಮೇಲೆ ಸೋನೆ ಮಳೆ ಅವಾಂತರಗಳನ್ನ ಸೃಷ್ಠಿಸುತ್ತಿವೆ. ಕೋಹಳ್ಳಿ, ಆಯನೂರು, ತ್ಯಾಜುವಳ್ಳಿ, ಹಾರನಹಳ್ಳಿ
ಮುದ್ದಿನಕೊಪ್ಪ, ಹಾರೋಬೆನವಳ್ಳಿಯಲ್ಲಿ ಸುಮಾರು 20 ಕ್ಕೂ ಹೆಚ್ಚುಮನೆಗಳು ಧರೆಗೆ ಉರುಳಿವೆ. ತ್ಯಾಜುವಳ್ಳಿಯಲ್ಲಿ ಶೋಭಾ ಸತೀಶ್ ಅವರ ಮನೆ, ಹಾರನಹಳ್ಳಿಯಲ್ಲಿ ಷಣ್ಮುಖ ರಾವ್, ಮುದ್ದಿನಕೊಪ್ಪದಲ್ಲಿ ಸುಕ್ಕಮ್ಮ ರಾಮಭೋವಿ. ಹಾರೋಬೆನವಳ್ಳಿಯಲ್ಲಿ ಬಸವರಾಜ್ ಎಂಬುವರ ಮನೆ ಹಾನಿಗೊಳಗಾಗಿವೆ.
ಸೊರಬದಲ್ಲಿ ಹಲವೆಡೆ ಧರೆಗುರುಳಿದ ವಿದ್ಯುತ್ ಕಂಬ
ಸೊರಬ ತಾಲೂಕು ಸಾರೆಕೊಪ್ಪ ಗ್ರಾಮ, ಹರಿಗಿ ನಾಗರಾಜ್ ಎಂಬವರ ಮನೆ ಕುಸಿದು ಬಿದ್ದಿದೆ. ಹಾಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಅವಾಂತರ ಸೃಷ್ಠಿಸಿವೆ. ಹಲವೆಡೆ ಕರೆಂಟ್ ಕಂಬ ಬಿದ್ದುಹೋಗಿದೆ.
ಉರುಳಿಬಿದ್ದ ಹರಗಿ ನಾಗರಾಜ್ ಮನೆ |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ