ಸುದ್ದಿಲೈವ್/ಶಿವಮೊಗ್ಗ
ಈ ರೀತಿ ಪ್ರಶ್ನೆ ಕೇಳಲು ಹಲವು ಕಾರಣಗಳಿವೆ. ಮೈಗೆ ಎಣ್ಣೆ ಹಚ್ಚಿಕೊಂಡಿರುವ ಎಲ್ಲಾ ಅಧಿಕಾರಿಗಳು 'ಇದು ನಮ್ಮದ್ದಲ್ಲ ಮತ್ತೊಬ್ಬರದ್ದು' ಎಂಬ ಪರಿಪಾಠ ಮುಂದು ವರೆಸಿಕೊಂಡು ಬಂದಿದ್ದಾರೆ.
ಹೋಗಲಿ ಮುಚ್ಚರಪ್ಪ ಎಂದರೆ ಕಳೆದ 10 ದಿನಗಳಿಂದ ಗುಂಡಿ ತೆಗೆದ ಪುಣ್ಯಾತ್ಮ ಇತ್ತ ಮುಖಮಾಡಿ ಮಲಗಿಲ್ಲ. ಕಾರಣ ಕಳೆದ 10 ದಿನಗಳಿಂದ ಸಾರ್ವಜನಿಕರ ಓಡಾಟ, ಇಲ್ಲಿ ವ್ಯಾಪಾರಸ್ಥರು ಪರದಾಡುವಂತಾಗಿದೆ. ಪುಣ್ಣಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ ಹಾಗಾಗಿ ಎಲ್ಲರೂ ಬೆಚ್ಚಗೆ ಕೂತಿದ್ದಾರೆ.
ಇರಲಿ! ಮಳೆಗಾಲದಲ್ಲಿ ಜನರ ಕಷ್ಟ ಹೇಳ ತೀರದು. ಒಂದು ಕಡೆ ಮಾಡಿದ ಅಭಿವೃದ್ಧಿ ಕಾಮಗಾರಿಗಳೆಲ್ಲ ನೀರಲ್ಲಿ ಕೊಚ್ಚಿಹೋಗುತ್ತಿವೆ. ಮತ್ತೊಂಡೆ ಕಾಮಗಾರಿ ರಿಪೇರಿ ಕೆಲಸವೆಂದು ತೆಗೆದ ಗುಂಡಿಗಳನ್ನ ಹಾಗೆ ತೆರೆದಿಟ್ಟು ದಿನಗಳು ಕಳೆದು ಹೋದರೂ ಮುಚ್ಚದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಹೆಚ್ ರಸ್ತೆಯಲ್ಲಿ ಹೊಸದಾಗಿ ನಿರ್ಮಿತವಾದ ಪಾಲಿಕೆ ಕಟ್ಟಡದ ಮುಂಭಾಗದ ಕುಚೇಲಕ್ಕಿ ಕೇರಿಗೆ ಹೋಗುವ ಜಾಗದಲ್ಲಿ ಕಳೆದ 10 ದಿನಗಳಿಂದ ಗುಂಡಿ ತೋಡಿ ಹೋದವರು ಈ ಮಾರ್ಗವನ್ನೇ ಮರೆತಿದ್ದಾರೆ. ಯವ ಇಲಾಖೆ ಈ ಗುಂಡಿ ತೆಗೆದು ಹೋಗಿದ್ದರೋ ಗೊತ್ತಿಲ್ಲ. ಆದರೆ ಸ್ಥಳೀಯರು ಮಾತ್ರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗುಂಡಿ ಒಳಗಿನ ಕರಳುಪಚ್ಚಿಯಲ್ಲಾ ಕಾಣುತ್ತಿದೆ. ಆದರೆ ಮುಚ್ಚುವ ಗೋಜಿಗೆ ಮಾತ್ರ ಸಂಬಂಧ ಪಟ್ಟ ಇಲಾಖೆಯವರು ಹೋಗದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಜನಗಳು ಸಿಡಿದೇಳುವ ಮೊದಲು ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಗುಂಡಿಮುಚ್ಚಿದರೆ ಅಷ್ಟೆ ಸಾಕು.
ಇದನ್ನೂ ಓದಿ-https://www.suddilive.in/2024/07/5000.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ