ಸೋಮವಾರ, ಜುಲೈ 8, 2024

ಅವಿರೋಧ ಆಯ್ಕೆ.

ಸುದ್ದಿಲೈವ್/ಹೊಳೆಹೊನ್ನೂರು

ಸಮೀಪದ ಅರಹತೊಳಲು ಗ್ರಾಮ ಪಂಚಾಯತಿಗೆ ನೂತನ ಉಪಾಧ್ಯಕ್ಷರಾಗಿ ಕೆ.ರಾಜಪ್ಪ ಅವಿರೋಧವಾಗಿ ಆಯ್ಕೆಯಾದರು.

ಈ ಮೊದಲ ಉಪಾಧ್ಯಕ್ಷರಾಗಿದ್ದ ಎನ್.ಟಿ.ಸಂಗನಾಥ್ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ರಾಜಪ್ಪ ಉಮೇದುವಾರಿಕೆ ಸಲ್ಲಿಸಿದ್ದು ಯಾವುದೇ ಪ್ರತಿಸ್ಪರ್ದಿ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಭದ್ರಾವತಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಕಾರ್ಯನಿರ್ವಹಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ಇದ್ದರು.

ಇದನ್ನೂ ಓದಿ-https://suddilive.in/archives/18770

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ