ಸುದ್ದಿಲೈವ್/ಶಿವಮೊಗ್ಗ
ನಗರದ ರಾಗಿಗುಡ್ಡ ಚಾನಲ್ ಹತ್ತಿರ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ದಾಳಿ ನಡೆಸುದ್ದಾರೆ. ದಾಳಿಯಲ್ಲಿ ನೂವರನ್ನ ಬಂಧಿಸಿ ಒಙದು ಕಾಲು ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಚಾನೆಲ್ ಬಳಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ,
ಸತ್ಯನಾರಾಯಣ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1) ಸಂಕೇತ, 23 ವರ್ಷ, ಗೋಪಾಳ, ಶಿವಮೊಗ್ಗ ಟೌನ್, 2) ಅಂಬರೀಶ, 26 ವರ್ಷ, ನ್ಯೂ ಮಂಡ್ಲಿ, ಶಿವಮೊಗ್ಗ ಟೌನ್ ಮತ್ತು 3) ಧನುಷ್, 20 ವರ್ಷ, ಪುರಲೆ, ಶಿವಮೊಗ್ಗ ಟೌನ್ ರವರನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿತರಿಂದ ಅಂದಾಜು ಮೌಲ್ಯ 68,000/- ರೂಗಳ 1 ಕೆಜಿ 243 ಗ್ರಾಂ ತೂಕದ ಒಣ ಗಾಂಜಾ ಮತ್ತು 2,350 ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0193/2024 ಕಲಂ 20(b), (II)B, 8(c) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಇದನ್ನೂ ಓದಿ-https://suddilive.in/archives/18302