ಗುರುವಾರ, ಜುಲೈ 18, 2024

ಮಂಜುನಾಥ್ ಗೌಡರಿಂದ ತುಂಗೆಗೆ ಬಾಗಿನ

ಸುದ್ದಿಲೈವ್/ತೀರ್ಥಹಳ್ಳಿ 

ಪುನರ್ವಸು ಮಳೆಯ ಅಬ್ಬರ ಹೆಚ್ಚಾಗಿ


ದ್ದು ತುಂಗಾ ನದಿ ಮೈದುಂಬಿ ಹರಿಯುತ್ತಿದೆ ಪುರಾಣ ಪ್ರಸಿದ್ಧ ರಾಮಮಂಟಪ. ಮುಳುಗುವ ಹಂತಕ್ಕೆ ತಲುಪಿದ್ದು ಬುಧವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ರವರು ತುಂಗಾ ನದಿಗೆ ಭಾಗಿನ ಅರ್ಪಿಸಿದರು.


ಬುಧವಾರ ತುಂಗಾ ನದಿಯ ದಡದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆಗೆ ಆಗಮಿಸಿ ಬಾಗಿನ ಅರ್ಪಿಸಿದರು . ಶಾಂತ ರೀತಿಯಲ್ಲಿ ತುಂಗೆಯು ಹರಿಯಲಿ, ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಿ ಎಂದು ಬೇಡಿಕೆಯನ್ನಿಟ್ಟು ತೀರ್ಥಹಳ್ಳಿಯ ತುಂಗಾ ನದಿಗೆ ಭಕ್ತಿ ಭಾವದಿಂದ ಬಾಗಿನ ಸಮರ್ಪಿಸಿದ್ದೇನೆ

 ಕಳೆದ ವರ್ಷ ಮಳೆ ಕಡಿಮೆಯಾಗಿ ಮಲೆನಾಡು ಕೂಡ ಬಯಲು ಸೀಮೆ ರೀತಿ ಕಷ್ಟ ಅನುಭವಿಸುವ ಪರಿಸ್ಥಿತಿ ಬಂದಿತ್ತು. ಕುಡಿಯುವ ನೀರಿಗೂ ತೊಂದರೆ ಆಗಿತ್ತು. ರಾಮೇಶ್ವರನ ಅನುಗ್ರಹದಿಂದ ಪುನರ್ವಸು ಮಳೆ ಚೆನ್ನಾಗಿ ಆಗಿದೆ.ಇಲ್ಲಿಯವರೆಗೆ ತೀರ್ಥಹಳ್ಳಿಯಲ್ಲಿ ಎಲ್ಲೂ ಅಪಾಯ ಆಗಿಲ್ಲ. ಜನರಿಗೆ, ಜಾನುವಾರುಗಳಿಗೆ ಯಾರಿಗೂ ಕೂಡ ಅಪಾಯವಾಗದ ರೀತಿಯಲ್ಲಿ ಆಶೀರ್ವಾದ ಮಾಡಲಿ ಎಂದರು.

ಇದನ್ನೂ ಓದಿ-http://www.suddilive.in/2024/07/blog-post_170.html

ಈ ವರ್ಷ ಇನ್ನು ಚೆನ್ನಾಗಿ ಮಳೆಯಾಗಲಿ, ಬೇಸಿಗೆಯಲ್ಲೂ ಸಹ ಕಳೆದ ವರ್ಷದ ಕಹಿ ನೆನಪು ಮರೆಸುವ ರೀತಿಯಲ್ಲಿ ತುಂಗೆಯು ಹರಿಯಲಿ, ರಾಮೇಶ್ವರ ನಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ  ಎಂದು ಪ್ರಾರ್ಥನೆ ಮಾಡಿದ್ದೇವೆ. ಯಾವುದೇ ಸಾವು ನೋವು ಆಗದೇ  ಶಾಂತಿಯಿಂದ ಮಳೆ ಮುಂದುವರಿಯಲಿ ಎಂದು ಹೇಳಿದರು.


ಈ ಸಂದರ್ಭದಲ್ಲಿ ಗೀತಾ ರಮೇಶ್, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ರಹಮತುಲ್ಲಾ ಅಸಾದಿ, ಬಿ. ಗಣಪತಿ, ರಾಘವೇಂದ್ರ ಶೆಟ್ಟಿ,ಡಾ. ಸುಂದರೇಶ್, ಕೆಸ್ತೂರು ಮಂಜುನಾಥ್, ವೈ ನಾಗೇಂದ್ರ, ಕುರುವಳ್ಳಿ ನಾಗರಾಜ್ ಅರ್ಜುನ ಗೌಡ ನಾಗೇಶ್ ಮೇಳಿಗೆ ಸಂದೀ್ ಗಾಡ್ರುಗದ್ದೆ ಸುಮಂತ್    ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ