ಆರಗ ಪರ ನವೀನ್ ಹೆಗ್ಗೂರು, ಬಿಜೆಪಿ ಜಿಲ್ಲಾಧ್ಯಕ್ಷರು ಬ್ಯಾಟಿಂಗ್

 ಸುದ್ದಿಲೈವ್/ಶಿವಮೊಗ್ಗ


ತೀರ್ಥಹಳ್ಳಿಯಲ್ಲಿ ಉದ್ಘಾಟನೆಗೊಂಡ ಸರ್ಕಾರಿಕಟ್ಟಡಗಳು ಸೋರುತ್ತಿದ್ದು ಅದನ್ನ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರ ಕಳಪೆ ಕಾಮಗಾರಿ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿದ್ದಾರೆ. 



ಈ ಬಗ್ಗೆ ನವೀನ್ ಹೆಗ್ಗೂರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಠಾಚಾರ ರಹಿತ ಜೀವನ ಬಡೆಸುತ್ತಿರುವ ಆರಗ ಜ್ಣಾನೇಂದ್ರ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸೇತುವೆ ಫ್ಲೈ ಓವರ್ ಶಾಲೆ ಕಟ್ಟಡಗಳನ್ನ ತಂದವರು ಆರಗರವರು.  ಯಾವ ತನಿಖೆಗೂ ಸಿದ್ದ ಎಂದರು. 


ಇವರ ಬಗ್ಗೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸ್ಥಾನಕ್ಕಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಿದ್ದಾರೆ. ದೊಡ್ಡವರ ಬಗ್ಗೆ ಜೋರಾಗಿ ಮಾತನಾಡಿ ಗಮನ ಸೆಳೆಯಲು ಮುಂದಾಗಿದ್ದಾರೆ. ಇವರ ಬಾಯಲ್ಲಿ ಆರಗ ಜ್ಞಾನೇಂದ್ರರ ಬಗ್ಗೆ ಮಾತನಾಡಿದ್ದಾರೆ. 


ಬಾಯಿ ಮಾತಿಗೆ ತನಿಖೆ ಹೇಳಿಕೆ ಕೊಡದೆ ನೈಜವಾಗಿ ತನಿಖೆ ನಡೆಸಿ ಆಗ ಕಳಪೆ ಎಂದು ಸಾಬೀತಾದಾಗ ನಮ್ಮ‌ನಾಯಕರು ಮಾತನಾಡುತ್ತಾರೆ. ಸರ್ಕಾರಿ ಕಟ್ಟಡಗಳು‌ ಮೇಲ್ಚಾವಣಿ ಸೋರುತ್ತಿಲ್ಲ. ಮಲೆನಾಡಿನಲ್ಲಿ ಮಳೆಗೆ ಕಟ್ಟಡ ಸೋರುವಿಕೆ ಅಚ್ಚರಿ ಪಡುವಂತದ್ದಲ್ಲ ಎಂದು ಸ್ಪಷ್ಟನೆ ನೀಡಿದರು. 

ಇದನ್ನೂ ಓದಿ-http://www.suddilive.in/2024/07/blog-post_679.html

ತೀರ್ಥಹಳ್ಳಿಯಲ್ಲಿ ಮನೆ ಕಟ್ಟಿದರೂ ಎರಡು ವರ್ಷಕ್ಕೆ ಶೀಟ್ ಮಾಡುಗಳನ್ನ ನಿರ್ಮಿಸುವ ಅನುವಾರ್ಯತೆ ಬಿದ್ದಿದೆ. ಭ್ರಷ್ಠಾಚಾರದ ಆರೋಪ ಮಾಡಿರುವ ಆಯನೂರು ನಮ್ಮ‌ಕ್ಷೇತ್ರಕ್ಕೆ ನಾಲ್ಕು ಮನೆ ಸದಸ್ಯರಾಗಿ ಅನುದಾನ ತಂದಿದ್ದೀರಿ ಎಂದು ಪ್ರಶ್ನಿಸಿದರು. 


ಇದುವರೆಗೆ ತೀರ್ಥಹಳ್ಳಿಯಲ್ಲಿ ನಡೆದ ಕಾಮಗಾರಿಯಲ್ಲಿ ಮೊನ್ನೆ 56 ಕೋಟಿ ರೂ. ಹಣ ವ್ಯಯ ಮಾಡಿ ಕುರುವಳ್ಳಿ ಮತ್ತು ಬಾಳೆ ಬೈಲಿನ ರಸ್ತೆ ತಡೆಗೋಡೆ ಕುಸಿದಿದೆ. ಈ ರೀತಿಯ ಕುಸಿತ ಮಲೆನಾಡಿನಲ್ಲಿ ಸಾಮಾನ್ಯ. ಮಲೆನಾಡು ಮತ್ತು ದ. ಕ.ದಲ್ಲಿ ಕುಸಿತ ಮಾಮೂಲಿ. ಅಂಕೋಲದಲ್ಲಿ ಮಂಗಳೂರಿನಲ್ಲಿ ಗುಡ್ಡ ಕುಸಿತವಾಗಿದೆ  ಇದಕ್ಜೆ ತಂತ್ರಜ್ಞಾನ ಏನಿದೆ ಅಖವಡಿಸಿಕೊಳ್ಳಬೇಕು ಎಂದು ಹೇಳಿದರು. 


56 ಸಾವಿರ ಕೋಟಿ ರೂ. ವ್ಯಯದ ಕಾಮಗಾರಿಯಲ್ಲಿ ಎರಡು ಸ್ಲಾಬ್ ಬಿದ್ದಿದೆ. ಅಷ್ಟು ಹಾಳಾಗಿಲ್ಲವೆಂದು  ನವೀನ್ ಹೆಗ್ಗೂರು ಸ್ಪಷ್ಟನೆ ನೀಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ 187 ಕೋಟಿ ಅವ್ಯವಹಾರ ನಡೆದಿಲ್ಲ. 94 ಕೋಟಿ ರೂ. ಹಗರಣವಾಗಿದೆ ಎಂದರೂ ಬಿಜೆಪಿ ಪಟ್ಟು ಬಿಡದೆ 187 ಕೋಟಿ ಅವ್ಯವಹಾರ ಎನ್ನುತ್ತಿದೆ. ತೀರ್ಥಹಳ್ಳಿಯಲ್ಲಿ ಕಳಪೆ ಕಾಮಗಾರಿಯಾಗಿರುವುದು 56 ಕೋಟಿ ರೂ. ಅಲ್ಲ ಎರಡು ಸ್ಲಾಬ್ ಬಿದ್ದಿದೆ ಅಷ್ಟೆ ಎಂದಿರುವುದು ಕುತೂಹಲ ಮೂಡಿಸಿದೆ.  


ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿಮೇಘರಾಜ್ ಮಾತನಾಡಿ, ಕಟ್ಟಡ ತಜ್ಞರು ಎಲೆಕ್ಡ್ರಿಷಿಯನ್ ಮಾಡಿರುವ ತೂತುನಿಂದ ನೀರು ಸೋರುತ್ತಿದೆ ಎಂದು ಅಭಿಮತ ನೀಡಿದ್ದಾರೆ. ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆ ಬಗ್ಗೆ ಕಾಂಗ್ರೆಸ್ ಗಮನಹರಿಸಿ ರೈತರ ಆತ್ಮಹತ್ಯೆ ತಡೆಗಟ್ಟಲು ಕ್ರಮ ಜರುಗಿಸಲಿ ಎಂದರು.

1 ಕಾಮೆಂಟ್‌ಗಳು

ನವೀನ ಹಳೆಯದು
Girl in a jacket
close