ಅಟೆಂಡರ್ ನೆತ್ತಿಯ ಮೇಲೆ ಬಿದ್ದಿತ್ತು ಸೀಲಿಂಗ್ ನ ಸಿಮೆಂಟ್



ಸುದ್ದಿಲೈವ್/ಶಿವಮೊಗ್ಗ


ಮಳೆಯಿಂದಾಗಿ ಗುಡ್ಡಗಳೇ ಭೂ ಕುಸಿತಕ್ಕೆ ಒಳಗಾಗಿವೆ. ಶಾಲೆಗಳ ಗೋಡೆ, ಹೆಂಚುಗಳು ಮಣ್ಣಿನ ಗೋಡೆಗಳು ತಂಡಿಗೆ  ಉರುಳುತ್ತಿವೆ.  ಅವಾಂತರಗಳನ್ನ ಸೃಷ್ಠಿಸಿವೆ.


ಅದರಂತೆ ಸಹ್ಯಾದ್ರಿ ಕಾಲೇಜಿನಲ್ಲಿ ಸೀಲಿಂಗ್ ಸಿಮೆಂಟ್ ಕಳಚಿಬಿದ್ದು  ಅಟೆಂಡರ್ ತಲೆಮೇಲೆ ಬದ್ದಿರುವುದಾಗಿ ತಿಳಿದು ಬಂದಿದೆ. ಸಹ್ಯಾದ್ರಿ ಕಾಲೇಜಿನ ವಿಜ್ಞಾನ ಕಾಲೇಜಿನ ಜಿಯೋಲಜಿ ಲ್ಯಾಬ್ ನಲ್ಲಿ ಈ ಅವಘಡ ಸಂಭವಿಸಿದೆ.


ರಾಜು ಎಂಬ ಲ್ಯಾಬ್‌ಅಟೆಂಡರ್ ತಲೆಯ ಮೇಲೆ ಬಿದ್ದಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸಣ್ಣಪುಟ್ಟ ಗಾಯಗಳಾಗಿವೆ. ನೋಡಲು ಈ ಘಟನೆ ಸಣ್ಣದಾಗಿ ಕಾಣಿಸಬಹುದು.


ಆದರೆ ಶಾಲಾ ಕಾಲೇಜುಗಳಲ್ಲಿ ಸುರಕ್ಷತೆ ಬಗ್ಗೆ ಕಾಲೇಜು ಆಡಳಿತ ಗಮನ ಹರಿಸಬೇಕಿದೆ. ಹಳೆಯ ಗೋಡೆ ಸೀಲಿಂಗ್ ಗಳ ದುರಸ್ಥಿ ಕೆಲಸ ಆಗಾಗ್ಗೆ ಮಾಡುವ ಜರೂರು ಇದೆ.


ಇದನ್ನೂ ಓದಿ-https://www.suddilive.in/2024/07/blog-post_460.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close