ಗುರುವಾರ, ಜುಲೈ 25, 2024

ಪೋಕ್ಸೋ ಆರೋಪಿಗೆ ಶಿಕ್ಷೆ



ಸುದ್ದಿಲೈವ್/ಶಿವಮೊಗ್ಗ


2023ನೇ ಸಾಲಿನಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ನಡೆದ ಲೈಂಗಿ ದೌರ್ಜನ್ಯ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1(POCSO) 20 ವರ್ಷ ಲಕ್ಷಾಂತರ ರೂ ದಂಡ ವಿಧಿಸಿ ತೀರ್ಪು ನೀಡಿದೆ. 


ಶಿವಮೊಗ್ಗ ತಾಲ್ಲೂಕಿನ  37 ವರ್ಷ ಮತ್ತು 39  ವರ್ಷದ ಯುವಕರಿಬ್ಬರು 14 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ  ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಕುಂಸಿ ಪೊಲೀಸ್ ಠಾಣೆಯಲ್ಲಿ ಕಲಂ 376 (2), 376(3) ಐಪಿಸಿ ಮತ್ತು ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. 


ಪ್ರಕರಣದ ತನಿಖಾಧಿಕಾರಿಗಳಾದ ಕುಂಸಿ ಠಾಣೆ ಪಿಐ ಹರೀಶ್ ಕೆ ಪಾಟೀಲ್, ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಶ್ರೀಧರ್ ಹೆಚ್. ಆರ್,  ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1(POCSO) ಶಿವಮೊಗ್ಗದಲ್ಲಿ  ಪ್ರಕರಣದ ವಿಚಾರಣೆ ನಡೆದಿದೆ. ಆರೋಪಿತರ ವಿರುದ್ಧ ಆರೋಪ ದೃಡ ಪಟ್ಟಿದೆ. 


ಮಾನ್ಯ ನ್ಯಾಯಾಧೀಶರಾದ ಮೋಹನ್ ಜೆ. ಎಸ್ ರವರು ಜು.23 ರಂದು ಪ್ರಕರಣದ ಆರೋಪಿತರಾದ  ಶಿವಮೊಗ್ಗ ತಾಲ್ಲೂಕಿನ  37 ವರ್ಷ ಮತ್ತು 39  ವರ್ಷದ ಯುವಕರಿಬ್ಬರಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ,  1ನೇ ಆರೋಪಿಗೆ 1,15,000/- ರೂ ದಂಡ ಮತ್ತು 2ನೇ ಆರೋಪಿಗೆ 1,05,000/- ರೂ ದಂಡ, ದಂಡ ಕಟ್ಟಲು ವಿಫಲರಾದಲ್ಲಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ, ದಂಡದ ಮೊತ್ತದಲ್ಲಿ 2 ಲಕ್ಷ ಮತ್ತು ಸರ್ಕಾರದಿಂದ 10 ಲಕ್ಷರೂಗಳನ್ನು  ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಲು ಆದೇಶಿಸಿರುತ್ತಾರೆ.

ಇದನ್ನೂ ಓದಿ-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ