ಬುಧವಾರ, ಜುಲೈ 31, 2024

ತಗ್ಗುಪ್ರದೇಶದ ಜನರಿಗೆ ಮೈಕ್ ಅನೌನ್ಸ್ ಮೆಂಟ್

 


ಸುದ್ದಿಲೈವ್/ಶಿವಮೊಗ್ಗ


ಸೀಗೆಹಟ್ಟಿ, ಮಂಡಕ್ಕಿ ಭಟ್ಟಿಯಲ್ಲಿ ರಸ್ತೆಯ ಮೇಲೆ ನದಿಯ ನೀರು ಹರಿದು ಬಂದ ಬೆನ್ನಲ್ಲೇ ನಿನ್ನೆ ಮಹಾನಗರ ಪಾಲಿಕೆ ನದಿಪಾತ್ರದ ಜನರಿಗೆ ವಾಹನದ ಮೂಲಕ ಸುರಕ್ಷಿತ ಜಾಗಕ್ಕೆ ತೆರಳಲು ಅಲರ್ಟ್ ನೀಡಿದೆ. 


ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಯಾಗುತ್ತಿದ್ದು ನದಿಯ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸಾಗಲು ಪಾಲಿಕೆ ವಾಹನದಲ್ಲಿ ಮೈಕ್ ಅನೌನ್ಸ್ ಮೆಂಟ್ ಮಾಡಲಾಗಿದೆ. 



ಶಾಂತಮ್ಮ ಲೇಔಟ್, ರಾಜೀವ್ ಗಾಂಧಿ ನಗರ, ವಿದ್ಯಾನಗರದ 13 ಮತ್ತು 14 ನೇ ತಿರುವು, ಕಂಟ್ರಿಕ್ಲಬ್ ರಸ್ತೆ, ಆರ್ ಐಆರ್ ಬಡಾವಣೆ, ಆರ್ ಟಿ ನಗರ, ನಿಸರ್ಗ ಲೇಔಟ್ ನ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಮೈಕ್ ಅನೌನ್ಸ್ ಮೆಂಟ್ ಮಾಡಲಾಗಿದೆ. 


ಇದನ್ನೂ ಓದಿ-https://www.suddilive.in/2024/07/blog-post_793.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ