ಸುದ್ದಿಲೈವ್/ಶಿವಮೊಗ್ಗ
ನಿನ್ನೆ ತಡರಾತ್ರಿ ಗಾಜನೂರಿನಲ್ಲಿ ನಡೆದ ಯುವತಿಯನ್ನ ಕಿಡ್ನ್ಯಾಪ್ ಮಾಡಿಕೊಂಡ ಪ್ರಕರಣ ಈಗ ಎಫ್ ಐಆರ್ ಆಗಿದೆ. ನಾಲ್ವರು ಯುವಕರನ್ನ ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.
ನಿನ್ನೆ ತಡರಾತ್ರಿ ಗಾಜನೂರಿಗೆ ಎನ್ ಆರ್ ಪುರದಿಂದ ಪ್ರತಾಪ್ ಮತ್ತು ಕಿರಣ್ ಕುಮಾರ್ ಎಂಬುವರು ಶಿವಮೊಗ್ಗಕ್ಕೆ ಕೃಷಿ ಉಪಕರಣವನ್ನ ಖರೀದಿಸಲು ಓಮಿನಿ ಕಾರ್ ನಲ್ಲಿ ಬಂದಿರುತ್ತಾರೆ.
ಓಮಿನಿ ಕಾರ್ ನಲ್ಲಿ ಬಂದಿದ್ದ ಕಿರಣ್ ಕುಮಾರ್ ಕೃಷಿ ಉಪಕರಣವನ್ನ ಖರೀದಿಸಿ ಪ್ರತಾಪ್ ಗೆ ಪರಿಚಯವಿದ್ದ ಯುವತಿಯನ್ನ ಭೇಟಿ ಮಾಡಲು ಶಿವಮೊಗ್ಗದ ಸಾಗರರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿ ಬಂದು ಕಾಯುತ್ತಿರುತ್ತಾರೆ.
ಯುವತಿಯನ್ನ ಕಾರಿನಲ್ಲಿ ಕೂರಿಸಿಕೊಂಡು ಯುವತಿಯೇ ಹೇಳಿದಂತೆ ಗಾಜನೂರು ಡ್ಯಾಂನ ಪವರ್ ಹೌಸ್ ಬಳಿ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ಬೈಕ್ ನಲ್ಲಿ ಬಂದ ಯುವಕರು ಓಮಿನಿ ವಾಹನದಲ್ಲಿ ಯುವತಿಯ ಮಾತು ಕೇಳಿ ಬಂದ ಕಾರಣ ಆ ವಾಹನ ಬಳಿ ಬರುತ್ತಾರೆ.
ಅಲ್ಲೇ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಪ್ರತಾಪ್ ಗೆ ಸ್ಥಳೀಯರು ಕೆಲವು ಪ್ರಶ್ನೆ ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸುವಂತೆ ನಟಿಸಿ ಪ್ರತಾಪ್ ಸ್ಥಳದಿಂದ ಕಾಲು ಕೀಳುತ್ತಾನೆ. ನಂತರ ವಾಹನದಲ್ಲಿದ್ದ ಕಿರಣ್ ನನ್ನ ಪ್ರಶ್ನಿಸಲು ಹೋದಾಗ ಕಿರಣ್ ಸಹ ಕಾಲು ಕೀಳುತ್ತಾನೆ.
ನಂತರ ಇದೇ ಸ್ಥಳೀಯರು ಅಲ್ಲೇ ಇದ್ದ ವೇಳೆ ವಾಹನಗಳು ಈ ಕಡೆ ಬರುತ್ತಿದ್ದಂತೆ ಒಮಿನಿಯಿಂದ ಕೆಳಗಿಳಿಸಿಕೊಂಡು ದೂರದ ಶೆಡ್ ಗೆ ಕರೆದುಕೊಂಡು ಹೋಗಿದ್ದಾರೆ. ಇತ್ತ ಓಡಿ ಹೋದ ಕಿರಣ್ 112 ಗೆ ದೂರು ನೀಡುತ್ತಾನೆ.
ದೂದಾಖಲಾಗಿದೆ ಮೇರೆಗೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಕಿಡ್ಬ್ಯಾಪ್ ಕೇಸ್ ದಾಖಲಾಗಿದೆ. ಕಿಡ್ನ್ಯಾಪ್ ಕೇಸ್ ನಲ್ಲಿ ಪ್ರತಾಪ್, ಕಿರಣ್ ಕುಮಾರ್, ಗಾಜನೂರಿನ ಅಭಿಷೇಕ್, ಮಂಜುಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ, ಇನ್ನಿಬ್ಬರ ಹುಡುಕಾಟದಲ್ಲಿ ಪೊಲೀಸರಿದ್ದಾರೆ. ಯುವತಿಯನ್ನ ಸುರಭಿ ಸಾಂತ್ವಾನ ಕೇಂದ್ರದಲ್ಲಿ ಬಿಡಲಾಗಿದೆ. ಇವತ್ತು ಆಕೆಯನ್ನ ಪೋಷಕರು ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಈ ಪ್ರಕಾರಣವನ್ನ ಪಿಐ ಮಂಜುನಾಥ್, ಪಿಎಸ್ಐ ಶಿವಪ್ರಸಾದ್ ಮತ್ತು ಅವರ ತಂಡ ಯುವತಿಯನ್ನ ರಕ್ಷಿಸಿ, ತನಿಖೆ ನಡೆಸಿದ್ದಾರೆ. 24 ಗಂಟೆಯ ಒಳಗೆ ಆರೋಪಿಯನ್ನ ಬಂಧಿಸಿ ಪ್ರಕರಣಕ್ಕೆ ನ್ಯಾಯ ಒದಗಿಸಿದ್ದಾರೆ. ಖಡಕ್ ಕಾರ್ಯಾಚರಣೆಯಿಂದ ನಾಲ್ವರು ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.
ಇದನ್ನೂ ಓದಿ-https://suddilive.in/archives/18461