ಸುದ್ದಿಲೈವ್/ಶಿವಮೊಗ್ಗ
ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ರೌಡಿಶೀಟರ್ ಗ್ಯಾಂಗ್ ವೊಂದು ಬಾಡಿಗೆ ಕಾರು ಪಡೆದು ಆತನನ್ನ ಅಪಹರಿಸಿ ನಂತರ ಹಲ್ಲೆ ನಡೆಸಿದ ರೀತಿಯಲ್ಲೇ ಮತ್ತೊಂದು ಹಲ್ಲೆ ಪ್ರಕರಣ ನಡೆದಿದೆ. ಈ ಪ್ರಕರಣದ ವಿರುದ್ಧ ಟಿಟಿ ಚಾಲಕ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಈ ಹಿಂದೆ ನಟೋರಿಯಸ್ ಗ್ಯಾಂಗ್ ವೊಂದು ಭದ್ರಾವತಿಯಿಂದ ಕಾರು ಬಾಡಿಗೆ ಪಡೆದು ಶಿವಮೊಗ್ಗದಿಂದ ಕುಂಚೇನಹಳ್ಳಿ ಮಾರ್ಗವಾಗಿ ಬಾಡಿಗೆ ಹೋಗುತ್ತಿದ್ದ ಕಾರಿನ ಚಾಲಕನನ್ನೇ ಕರೆದೊಯ್ದು, ಆತನ ಮೇಲೆ ಹಲ್ಲೆ ಮಾಡಿ ರಾಕ್ಷಸೀತನ ಮೆರೆದಿತ್ತು.
ಅದೇರೀತಿ ಈಗ ಮತ್ತೊಂದು ಪ್ರಕರಣ ನಡೆದಿದೆ. 10 ಜನ ಅಪರಿಚಿತರೊಂದಿಗೆ ಹಲ್ಲೆ, ಅಪಹರಣದ ರೀತಿಯಲ್ಲಿ ಪ್ರಕರಣ ನಡೆದಿದೆ ಎಂದು ಟಿಟಿ ಚಾಲಕ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಎ 05 ಎಎಫ್ 1431ರ ಟಿಟಿ ಬಾಡಿಗೆ ಇದೆ ಹೋಗು ಎಂದು ಮಾಲೀಕರಾದ ಮಂಜುರವರ ಮಗ ಕಾರ್ತಿಕ್‌ರವರು ಚಾಲಕನಿಗೆ ತಿಳಿಸಿದ್ದಾರೆ. ಅದರಂತೆ ಬೊಮ್ಮನ್ ಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ನಿಂದ ಬಾಡಿಗೆ ಹತ್ತಿಸಿಕೊಂಡ ಚಾಲಕ ಜು.10 ರಂದು ರಾತ್ರಿ 9-30 ಕ್ಕೆ ಬಸವಗಂಗೂರಿನ ಮೂಲಕ ಕುಂಸಿಕಡೆ ತಿರುಗಿಸಿದ್ದಾನೆ.
ಬಸವಗಂಗೂರಿನಲ್ಲಿ ನಂತರ ಒಬ್ವರಾದ ಮೇಲೆ ಒಬ್ವರು ಟಿಟಿಯನ್ನ ಹತ್ತಿದ ಗ್ಯಾಂಗ್ ವಾಹನದ ಮಾಲೀಕನನ್ನ ಕರೆಯಿಸು ಎಂದು ಸೂಚಿಸಿದ್ದಾರೆ. ಯಾಕೆ ಎಂದು ಪ್ರಶ್ನಸಿದ ಟಿಟಿ ಚಾಲಕನನ್ನ ವೀಲ್ ರಾಡನಿಂದ ಹಲ್ಲೆ ಮಾಡಲಾಗಿದೆ. ಚಾಲಕನ ಸೀಟಿನಿಂದ ಎಳೆದುಹಾಕಲಾಗಿದೆ.
ಬಸವಗಂಗೂರಿನಿಂದ ಕುಂಸಿಗೆ ಹೋಗುವ ದಾರಿ ಮಧ್ಯದಲ್ಲಿ ಬರುವ ಬಾರ್ ಎದರು ಗಾಡಿ ನಿಲ್ಲಿಸಿ ವಾಹನವನ್ನ ಗ್ಯಾಂಗ್ ವಾಹನದ ವಸ್ತುವನ್ನ ಹಾಳು ಮಾಡಿದ್ದಾರೆ. ಎಲ್ಲರೂ ಬಾರ್ ಗೆ ಇಳಿದು ಹೋದ ವೇಳೆ ಟಿಟಿ ಚಾಲಕ ಉಪಾಯದಿಂದ ತಪ್ಪಿಸಿಕೊಂಡು ಬಂದು ಮಾಲೀಕ ಮಂಜುಗೆ ತಿಳಿಸಿದ್ದಾರೆ.
ಮಾಲೀಕರು ಯಾರು ಬಾಡಿಗೆಗೆ ಕರೆದಿದ್ದರು ಅವರಿಗೆ ಕರೆ ಮಾಡಿದಾಗ ಸ್ಚಿಚ್ ಆಫ್ ಬಂದಿದೆ. ವೀಲ್ ರಾಡಿನಿಂದ ಯುವಕನ ಮೇಲೆ ಹಲ್ಲೆ ನಡೆಸಿದ 10-12 ಜನ ಅಪರಿಚಿತ ಯುವಕರ ವಿರುದ್ಧ ಚಾಲಕ ದರ್ಶನ್ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/19130
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ