ಸುದ್ದಿಲೈವ್/ಶಿವಮೊಗ್ಗ
ಇಡಿ ದಾಳಿಯನ್ನು ಎರಡು ರೀತಿಯಲ್ಲಿ ನೋಡಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ ಕಾನೊನು ರೀತಿ ಆದರೆ ಸರಿ, ಕೇಂದ್ರ ಸರಕಾರಕ್ಕೆ ಒಂದು ಚಟ ಇದೆ. ಇಡಿ ದಾಳಿ ಮಾಡಿಸೋದು, ಎದುರಿಸೋದು ಅವರ ಚಟ. ಇಂತಹ ವಿಚಾರದಲ್ಲಿ ಕಾನೊನು ಮೇಲಿರಬೇಕು ಎಂದರು.
ಕಾನೊನು ದುರುಪಯೋಗ ಆಗಬಾರದು, ಮುಡಾ ಹಗರಣ ವಿಚಾರ ಹಿನ್ನೆಲೆಯಲ್ಲಿ ಬಿಜೆಪಿ ಹೋರಾಟ ಮಾಡಿದರೆ ಮಾಡಿಕೊಳ್ಳಲಿ ಎಂದರು. ಅಧಿಕಾರಿಗಳ ವರ್ಗಾವಣೆ ದಂಧೆ ಬಗ್ಗೆ ಬಸವರಾಯರೆಡ್ಡಿ ಆರೋಪ ವಿಚಾರದ ಬಗ್ಗೆ ಮಾತನಾಡಿ, ಬಸವರಾಯರೆಡ್ಡಿ ಅವರು ಆ ರೀತಿ ಹೇಳಿಲ್ಲ ಎಂದರು.
ಅವರು ಹೇಳಿದಾಗ ನಾನು ಪಕ್ಕದಲ್ಲೇ ಇದ್ದೆ. ದಂಧೆ ನಡೆದರೆ ನಿಲ್ಲಬೇಕು ಅಂತಾ ಹೇಳಿದರು ಅಷ್ಟೇ ಎಂದರು. ನಂತರ ಎಂ ಎಲ್ ಸಿ ಬಲ್ಕಿಸ್ ಬಾನು ಅವರ ನೂತನ ಕಚೇರಿ ತಹಶೀಲ್ದಾರ್ ಕಚೇರಿಯಲ್ಲಿ ಆರಂಭವಾಗಿದ್ದು ಅದನ್ನ ಸಚಿವರು ಉದ್ಘಾಟಿಸಿದರು.
ಇದನ್ನೂ ಓದಿ-https://suddilive.in/archives/18999
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ