ಭಾನುವಾರ, ಜುಲೈ 14, 2024

ಭೀಮಾ ಗೋಲ್ಡ್ ಅಂಗಡಿಯಲ್ಲಿ ಕೈಚಳಕ ತೋರಿದ್ದ ಆರೋಪಿಗಳ ಬಂಧನ

ಸುದ್ದಿಲೈವ್/ಶಿವಮೊಗ್ಗ

ಮೇ.25 ರ ಅಕ್ಷಯ ತೃತೀಯ ದಿನದಂದು ಮದ್ಯಾಹ್ನ ಇಬ್ಬರು ಮಹಿಳೆಯರು ಶಿವಮೊಗ್ಗ ಬಿಹೆಚ್ ರಸ್ತೆ, ಭೀಮಾ ಗೋಲ್ಡ್ ಅಂಗಡಿಗೆ ಗ್ರಾಹಕರಂತೆ ಬಂದು ಬಂಗಾರ ಖರೀದಿ ಮಾಡುವ ನೆಪದಲ್ಲಿ ಚಿನ್ನಾಭರಣವನ್ನ ಕದ್ದುಕೊಂಡು ಹೋಗಿದ್ದ ಪ್ರಕರಣವನ್ನ ದೊಡ್ಡಪೇಟೆ ಪೊಲೀಸರು ಬೇಧಿಸಿದ್ದಾರೆ.

ಇಂದು ದೊಡ್ಡಪೇಟೆ ಪೊಲೀಸರ ಕಾರ್ಯಾಚರಣದೇ ಸುದ್ದಿ. ಈ ವಿಷಯದಲ್ಲಿ ಠಾಣೆಯ ಪಿಐ ಅವರನ್ನ ಅಭಿನಂದಿಸಲೇ ಬೇಕು. ಕಳ್ಳತನ ಪ್ರಕರಣಗಳನ್ನ ಟ್ರೇಸ್ ಮಾಡಿ ರಿಕವರಿ ಮಾಡೋದು ಬಹಳ ಸುಲಭದ ಕೆಲಸವಲ್ಲ. ಅದೂ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಪ್ರಕರಣವನ್ನ ಬೇಧಿಸಿದ ದೊಡ್ಡಪೇಟೆ ಪೊಲೀಸರು ಅಂಗಡಿ ಕಳವು ಪ್ರಕರಣವನ್ನ ಬೇಧಿಸಿ ಇಬ್ಬರು ಮಹಿಳೆಯರನ್ನ ಬಂಧಿಸಿದ್ದಾರೆ.

ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಪ್ರಕರಣದಲ್ಲಿ 6 ಜನ ಮಹಿಳೆಯರೇ ಆರೋಪಿಗಳಿದ್ದರು. ಈ ಚಿನ್ನಾಭರಣದ ಅಂಗಡಿಯ ಪ್ರಕರಣದಲ್ಲಿ ಗ್ರಾಹಕರಂತೆ ಬಂದು ಖರೀದಿಸುವ ನೆಪದಲ್ಲಿ ಚಿನ್ನಾಭರಣವನ್ನ ಕಳುವು ಮಾಡಿದ  ಆರೋಪಿಗಳು ಸಹ ಮಹಿಳೆಯರೆ.

ಅಂಗಡಿಯ ಲಾಕೆಟ್ ಕೌಂಟರ್ ಹತ್ತಿರ ಹೋಗಿ ಲಾಕೆಟ್ ಟ್ರೇ ತೆಗೆಸಿ, ಟ್ರೇನಲ್ಲಿಟ್ಟಿದ್ದ 3 ಬಂಗಾರದ ಲಾಕೆಟ್ ಪಡೆದುಕೊಂಡು ನೋಡುವವರಂತೆ ನಟಿಸಿ ಮತ್ತೆ ಬೇರೆ ಲಾಕೆಟ್ ಟ್ರೇ ತೋರಿಸುವಂತೆ ಹೇಳಿ ಕೈಯಲ್ಲಿದ್ದ ಸುಮಾರು 3 ಗ್ರಾಂ 470 ಮೀಲಿ ತೂಕದ 27,000/-ರೂ ಬೆಲೆಬಾಳುವ 3 ಲಾಕೆಟ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ  ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ,  ಮತ್ತು  ಕಾರಿಯಪ್ಪ ಎ.ಜಿರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜಿನಪ್ಪರವರ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ರವಿ ಪಾಟೀಲ್ ರವರ ನೇತೃತ್ವದಲ್ಲಿ,

ಎಎಸ್ಐ ಶ್ರೀ ನಾಗರಾಜ್ , ಹೆಚ್ ಸಿ ರವರಾದ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ರವರಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು ಪ್ರಕರಣದ ಆರೋಪಿತರಾದ 1)ಸರೋಜ ಕೆ, 49 ವರ್ಷ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಮತ್ತು 2) ಕು|| ತನ್ವಿ ಎಸ್.ಎಂ, 22 ವರ್ಷ, ರಾಯಲ್ ಆರ್ಕೇಡ್ ಹಿಂಭಾಗ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಇವರನ್ನ‌ಬಂಧಿಸಿದೆ.

ಆರೋಪಿತರಿಂದ ಅಂದಾಜು ಮೌಲ್ಯ 27,000/- ರೂಗಳ 3 ಗ್ರಾಂ 470 ಮಿಲಿ ತೂಕದ 3 ಬಂಗಾರದ ಲಾಕೆಟ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.  ತನಿಖಾ ತಂಡದ ಉತ್ತಮವಾದ ಕಾರ್ಯವನ್ನು  ಪೊಲೀಸ್ ಅಧೀಕ್ಷಕರು ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/19288

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ