ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವ ವಿದ್ಯಾಲಯದ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ಕುವೆಂಪು ವಿವಿಯ ಬ್ಯಾಂಕ್ ಸರ್ಕಲ್ ನಿಂದ ಪ್ರತಿಭಟನೆ ಮೆರವಣಿಗೆ ವಿಸಿ ಕಚೇರಿಯ ವರೆಗೆ ನಡೆಸಲಾಯಿತು.
ವಿವಿಧ ಬೇಡಿಕೆ ಈಡೇರಿಸುವಂತೆ ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಯುನಿವರ್ಸಿಟಿಯಲ್ಲಿ ಆಗುತ್ತಿರುವ ತೊಂದರೆಗಳಿಗೆ ಬೇಸತ್ತು ಪ್ರತಿಭಟನೆ ಇಳಿದ ವಿದ್ಯಾರ್ಥಿಗಳು. ನಿನ್ನ ವಿವಿಯ ಆವರದಲ್ಲಿ ಹಾಸ್ಟೆಲ್ ನ ಊಟೋಪಚಾರವನ್ನ ವಿರೋಧಿಸಿಯೂ ಪ್ರತಿಭಟನೆ ನಡೆದಿದೆ.
ವಿದ್ಯಾರ್ಥಿ ವೇತನ, ಫಲಿತಾಂಶ ವಿಳಂಬ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳ ವಿಳಂಬ, ವಿದ್ಯಾರ್ಥಿ ನಿಲಯದ ಅವ್ಯವಸ್ಥೆ, ಕಾಲೇಜು ಕೊಠಡಿಗಳು ಸೋರುತ್ತಿರುವುದು ಹೀಗೆ ಹಲವು ವಿಚಾರಗಳಿಗೆ .ಬೇಸತ್ತು ಕಳೆದ ದಿನ ವಿದ್ಯಾರ್ಥಿ ಓರ್ವ ಆತ್ಮಹತ್ಯೆ ಯತ್ನ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಕೂಡಲೇ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ-https://suddilive.in/archives/19019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ