ಭಾನುವಾರ, ಜುಲೈ 14, 2024

KSRTC ಬಸ್ ಸ್ಟ್ಯಾಂಡ್ ಕಳ್ಳಿಯರು

ಸುದ್ದಿಲೈವ್/ಶಿವಮೊಗ್ಗ

KSRTC ಬಸ್ ನಿಲ್ದಾಣದಲ್ಲಿ ಕಳುವಾಗುತ್ತಿದ್ದ ಚಿನ್ನಾಭರಣವನ್ನ ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿ ಕಳುವು 6 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ KSRTC ಬಸ್ ನಿಲ್ದಾಣದಲ್ಲಿ ಕಳುವು ಆಗುತ್ತಿತ್ತ ಪ್ರಕರಣಗಳು ಪತ್ತೆಯಾಗದೆ  ಹಾಗೆ ಉಳಿಯುತ್ತಿದ್ದವು.

ಆದರೆ ದೊಡ್ಡಪೇಟೆ ಪೊಲೀಸರ ಶ್ರಮದಿಂದ ಅದರಲ್ಲೂ ಪಿಐ ರವಿ ಸಂಗನಗೌಡ ಪಾಟೀಲ್ ಅವರ ಖಡಕ್ ಕಾರ್ಯಾಚರಣೆಯಿಂದಾಗಿ ಪ್ರಕರಣ ಪತ್ತೆಯಾಗಲು ಸಹಕಾರಿಯಾಗಿದೆ. ಇದುವರೆಗೂ ಕಳುವಾಗಿದ್ದ ಅಷ್ಟು ಪ್ರಕರಣಗಳಲ್ಲಿ 9 ಪ್ರಕರಣಗಳು ಬಯಲಿಗೆ ಬಂದಿವೆ.

ಇದರಿಂದಾಗಿ ಎಲ್ಲಾ ಪ್ರಕರಣಗಳನ್ನ ದೊಡ್ಡಪೇಟೆ ಪೊಲೀಸರು ಬೇಧಿಸಿದ್ದಾರೆ. ಪ್ರತಿವರ್ಷ KSRTC ಬಸ್ ನಿಲ್ದಾಣಗಳಲ್ಲಿ 12-15 ಚಿನ್ನಾಭರಣ ಕಳವು ಪ್ತಕರಣಗಳು ದಾಖಲಾಗುತ್ತಿತ್ತು. ಕಳೆದ ವರ್ಷ 26 ಪ್ತಕರಣಗಳು ದಾಖಲಾಗಿದ್ದವು.  ಕಳೆದ ವರ್ಷ ಪ್ರಕರಣಗಳಲ್ಲಿ ಲೇಡಿ ಕಳ್ಳಿಯರ ಪೈಕಿ ತಾಹೀರ್ ರೋಹಿ ಎಂಬ ಮಹಿಳೆಯೇ ಭಾಗಿಯಾಗಿದ್ದಳು.

ಬಡವಳಿದ್ದಾಳೆ ಎಂಬ ಕಾರಣಕ್ಕೆ ಆಕೆ ಫೋಟೊವನ್ನ ಹಾಕದೆ ಸುದ್ದಿಲೈವ್ ಸುದ್ದಿ ಮಾಡಿತ್ತು. ಆದರೆ ಈ ಮಹಿಳೆ ಮತ್ತೆ ಅದೇ ಚಾಳಿಯನ್ನ ಮುಂದು ವರೆಸಿದ್ದಾಳೆ. ಈಕೆಯನ್ನ ಬೆನ್ನು ಹತ್ತಿದ ಪೊಲೀಸರಿಗೆ ಎರಡು ಪ್ರಕರಣ ಬಯಲಿಗೆಳಿದಿದ್ದಾರೆ.  ಎರಡು ಪ್ರಕರಣಗಳನ್ನ‌ಬೇಧಿಸಿದ ಪೊಲೀಸರು 6 ಮಹಿಳೆಯರನ್ನ ಬಂಧಿಸಿದ್ದಾರೆ.

ಎರಡು 2024 ರಲ್ಲಿ ನಡೆದ ಪ್ರಕರಣವನ್ನೇ ಪೊಲೀಸರು ಬಯಲಿಗೆಳೆದಿದ್ದಾರೆ.  ಭದ್ರಾವತಿಯ ಮಹಿಳೆಯೋರ್ವಳು ಶಿವಮೊಗ್ಗಕ್ಕೆ ಬಂದು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿಕುಳಿತಿದ್ದಾಗ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬಂಗಾರದ  ನೆಕ್ಲೆಸ್ ಕಳುವು ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿ ತಾಹೀರಾ ರೋಹಿಯ ಪಾತ್ರ ಬಹುಮುಖ್ಯವಾಗಿತ್ತು. ಮಂಜುನಾಥ ಬಡಾವಣೆಯ ಈ ತಾಹೀರಾ ರೋಹಿ ಈ ಹಿಂದೆಯೂ ಪ್ರಕರಣದಲ್ಲಿ ಭಾಗಿಯಾಗಿದ್ದಳು. ಆರಂಭದಲ್ಲಿ ದೊಡ್ಡಪೇಟೆ ಠಾಣೆಯ ಪಿಐ ಆಗಿ ಬಂದಿದ್ದ ರವಿ ಸಂಗನಗೌಡ ಪಾಟೀಲರೇ ಆಕೆಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮತ್ತೆ ತನ್ನ ಕೈಚಳಕ ತೋರಿ ಮಹಿಳೆಯ ನೆಕ್ಲೆಸ್ ಕಳುವು ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ.

ಈ ಪ್ರಕರಣದಿಂದ ಎರಡು ಪ್ರಕರಣ ಹೊರಗೆ ಬಿದ್ದಿದೆ. 5,45,000/- ರೂ. ಮೌಲ್ಯದ 81.800 ಗ್ರಾಂ ಪತ್ತೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಜೆಪಿ ನಗರದ ಮಹಿಳೆಯೊಬ್ಬರು ದಾವಣಗೆರೆಯಲ್ಲಿ ಕಾರ್ಯಕರ್ಯಕ್ರಮಕ್ಕೆಂದು ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಜೆ ಬಂದು ಬಸ್ ಹಿಡಿದು ಮೊಬೈಲ್ ತೆಗೆಯಲು ಹೋದಾಗ ಬಂಗಾರದ ಆಭರಣ ಕಳುವಾಗಿತ್ತು.

ಈ ಪ್ರಕರಣಗಳಲ್ಲಿ ಐವರು ಕಳ್ಳಿಯರು ಶಾಮೀಲಾಗಿದ್ದಾರೆ. ಇವರೆಲ್ಲರೂ ಭದ್ರಾವತಿಯ ನಿವಾಸಿಗಳಾಗಿದ್ದಾರೆ. ಹೊಸಮನೆ ಬಡಾವಣೆ ನಿವಾಸಿ ಶಾಂತಿ ಯಾನೆ‌ ಕರ್ಕಿ, ಮೀನಾಕ್ಷಿ, ದುರ್ಗ, ಸುಶೀಲಮ್ಮ, ಸಾವಿತ್ರಿ ಎಂಬುವರನ್ನ ಬಂಧಿಸಲಾಗಿದೆ.  ಈ ಪ್ರಕರಣದಿಂದ 2023 ಪ್ರಕರಣವೂ ಪತ್ತೆಯಾಗಿವೆ. ಈ ಮಹಿಳೆಯರು 7 ಪ್ರಕರಣ ಬಯಲಾಗಿದೆ. 8.13 ಲಕ್ಷದ ಮೌಲ್ಯದ ಚಿನ್ನಾಭರಣ ಬಯಲಾಗಿದೆ. ಇಲ್ಲಿಗೆ ಈ ವರ್ಷದ ಬಹುತೇಕ ಪ್ರಕರಣ ಪತ್ತೆಯಾದಂತಾಗಿದೆ.

ಇದನ್ನೂ ಓದಿ-https://suddilive.in/archives/19253

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ