ಕ್ರೈಸ್ತಧರ್ಮಗುರು ಆಂಥೋಣಿ ಪೀಟರ್ |
ಸುದ್ದಿಲೈವ್/ಶಿವಮೊಗ್ಗ
ಸವಳಂಗ ಬಳಿಯ ಚಿನ್ನಿಕಟ್ಟೆಯ ಬಳಿ ಕಾರು ಮತ್ತು KSRTC ಬಸ್ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಕ್ರೈಸ್ತಧರ್ಮದ ಗುರುಗಳೊಬ್ಬರು ಅಸುನೀಗಿದ್ದಾರೆ.
ಸಂಜೆ ಸುಮಾರು 4 ಗಂಟೆಯ ವೇಳೆಗೆ ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಮತ್ತು ಶಿವಮೊಗ್ಗದಿಂದ ಹೊರಟಿದ್ದ ಸೆಲಿರಿಯೋ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ.
ಕಾರಿನಲ್ಲಿದ್ದ ಫಾದರ್ ಆಂಥೋಣಿ ಪೀಟರ್ ಸ್ಥಳದಲ್ಲಿಯೇ ಸಾವುಕಂಡಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದು ಬರಬೇಕಿದೆ. ನ್ಯಾಮತಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇವರ ಜೊತೆ ಬ್ರದರ್ ಸ್ಟೀಫನ್ ಗಂಭೀರಗಾಯವಾಗಿದೆ.
ಆಂಥೋಣಿ ಪೀಟರ್ ಅವರು ಶಿಕಾರಿಪುರ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯಕ್ಕೆ ಕಳೆದ ಒಂದು ವರ್ಷ ತಿಂಗಳ ಹಿಂದೆ ಫಾದರ್ ಆಗಿ ಆಗಮಿಸಿದ್ದರು.
ಇದನ್ನೂ ಓದಿ-https://www.suddilive.in/2024/07/blog-post_732.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ